ಸಿನಿ ಸುದ್ದಿ

‘ಮಲೈಕಾ v/s ದೀಪಿಕಾ’ ಯಾರು ಹಿತವರು ನಮಗೆ..?

Published

on

ಟೈಟಲ್ ನೋಡಿ ಯಾಮಾರಬೇಡಿ ಸ್ವಾಮಿ. ಇದು ಬಾಲಿವುಡ್ ಬೆಡಗಿಯರ ಕ್ಯಾಟ್ ಫೈಟ್ ಗೆ ಸಂಬಂಧಿಸಿದ ಲೇಖನ ಅಲ್ಲ. ಮುಂಬೈ ನಾ ಸೋನಮ್ ಕಪೂರ್ ರ ಬರ್ತಡೇ ಪಾರ್ಟಿ ಗೆ ತನ್ನ ಗೆಳೆಯ ಅರ್ಜುನ್ ಕಪೂರ್ ರೊಂದಿಗೆ ಬಂದ ಮಲೈಕ  ಕಂಗೊಳಿಸಿದ್ದು, ಪ್ರಸಿದ್ಧ ಬಾಲಿವುಡ್ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ರವರ ಆರು ಗಜದ ಶ್ವೇತಾ ವರ್ಣದ  ಸುವರ್ಣ ಗುಲ್ದಸ್ಥಾ ಸೀರೆ ಯಲ್ಲಿ. ರೆಡ್ಲಿಪ್ಸ್, ಲೂಸ್ ಹೇರ್ ಬನ್, ರೆಡ್ ಕ್ಲಚ್ನ ಕಾಂಬಿನೇಷನ್ ನಲ್ಲಿ  ವಜ್ರದ ಪುತ್ಥಳಿ ಯಂತೆ ಮಿಂಚಿದರು ಮಲೈಕಾ.

ವಿಷಯ ಇಷ್ಟೇ ಆಗಿದ್ದರೆ, ಫ್ಯಾಷನ್ ಕ್ರಿಟಿಕ್ಸ್ ಗಳ ಬಾಯಿಗೆ ಆಹಾರ ವಾಗುತ್ತಿರಲಿಲ್ಲ.. ಈ ಹಿಂದೆ ದಿಪಿಕಾ ಪಡುಕೋಣೆ ಸಹ ರೋಹಿತ್ ಬಾಲ್ ರ ಇದೇ ಶ್ವೇತ ವರ್ಣದ ಗುಲ್ದಸ್ಥಾ ಸೀರೆಯನ್ನು ರಣವೀರ್ ಸಿಂಗ್ ರ ಸಂಬಂಧಿಕರ ಮದುವೆಗೆ ಧರಿಸಿದ್ದು, ದೀಪಿಕಾ ರ ಸ್ಟೈಲ್ ಕಾಪಿ ಮಾಡಿದರಾ ಮಲೈಕಾ ಎಂಬ ಗುಸುಗುಸು ಫ್ಯಾಷನ್ ಲೋಕದಲ್ಲಿ ಎದ್ದಿದೆ.

ಅಂದಹಾಗೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಸೀರೆಯ ಬೆಲೆ ಬರೋಬ್ಬರಿ ಒಂದುವರೆ ಲಕ್ಷ! ಇಬ್ಬರೂ ಶ್ವೇತಾಂಬರಿಯರಲ್ಲಿ ಯಾರು ಈ ದುಬಾರಿ ಸೀರೆಯಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಡರು ಎಂಬುದನ್ನು ಕಾಮೆಂಟ್ ಮಾಡಿ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version