ದಿನದ ಸುದ್ದಿ

ಮಲ್ಲಿಕಾರ್ಜುನ.ಬಿ ಅವರಿಗೆ ಪಿಎಚ್ ಡಿ ಪದವಿ

Published

on

ಸುದ್ದಿದಿನ ಡೆಸ್ಕ್ : ಮಲ್ಲಿಕಾರ್ಜುನ.ಬಿ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ಪ್ರಧಾನ ಮಾಡಿದೆ.

ಇವರು “Access and Use of Information Resources by Working Journalist in Karnataka with Special Reference to Print Media” ಪ್ರಂಧವನ್ನು ಮಂಡಿಸಿದ್ದು, ಇವರಿಗೆ ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಟಿ.ಸಂತೋಷಕುಮಾರ್ ರವರ ಮಾರ್ಗದರ್ಶನದಲ್ಲಿ ವಿಷಯ ಮಂಡಿಸಿದ್ದರು.

ಮಲ್ಲಿಕಾರ್ಜುನ. ಬಿ ಅವರು ಶ್ರೀಮತಿ ಶಾಂತಮ್ಮ ಶ್ರೀ.ಚಿದಾನಂದಪ್ಪ ಭೋವಿ ಮಸ್ಕಿ ತಾಲ್ಲೂಕು ರಾಯಚೂರು ಜಿಲ್ಲೆ ಇವರ ಮಗನಾಗಿದ್ದು, ಪ್ರಸ್ತುತ ಶ್ರೀ.ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಗಿರಿ ದಾವಣಗೆರೆ ಜಿಲ್ಲೆಯಲ್ಲಿ ಆಯ್ಕೆ ಶ್ರೇಣಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version