ದಿನದ ಸುದ್ದಿ
ಮಲ್ಯನ12.500 ಕೋಟಿ ರೂ ಆಸ್ತಿ ಮುಟ್ಟುಗೋಲಿಗೆ ಪ್ಲಾನ್
ಸುದ್ದಿದಿನ ಡೆಸ್ಕ್: ವಿವಿಧ ಬ್ಯಾಂಕ್‍ಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಅವರಿಗೆ ಸೇರಿದ 12.500 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಲಾಯ ಮುಂದಾಗಿದೆ.
ಮಲ್ಯ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸುವಂತೆ ಇಡಿ ತಂಡವು ಮುಂಬಯಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದು, ಈ ಮೂಲಕ ಮಲ್ಯ ಅವರಿಗೆ ಸೇರಿದ ಆಸ್ತಿಯನ್ನು ಸುಲಭವಾಗಿ ಹಾಕಿಕೊಳ್ಳಬಹುದು ಎಂಬುದು ಇಡಿ ಚಿಂತನೆ.
ಮಲ್ಯ ಅವರಿಗೆ ಸೇರಿದ ಕಿಂಗ್ ಫಿಷರ್ ಏರ್ ಲೈನ್ಸ್ ಆಸ್ತಿಯು ವಿದೇಶದಲ್ಲೂ ಕೂಡ ಇದ್ದು, ಹೊಸದಾಗಿ ಜಾರಿಗೆ ತಂದಿರುವ ಕಾನೂನಿನಡಿಯಲ್ಲಿ ಮಲ್ಯ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೊಷಿಸಿದ್ದಲ್ಲಿ ಮಲ್ಯ ಅವರಿಗೆ ಸೇರಿದ ಎಲ್ಲ ಆಸ್ತಿಗಳನ್ನು ವಶಕ್ಕೆ ಪಡೆಯಬಹುದಾಗಿದೆ.