ದಿನದ ಸುದ್ದಿ

ಆತ್ಮಹತ್ಯೆಗೆ ವಿಮಾನ‌ ಕದ್ದ ಭೂಪ: ವಿಡಿಯೋ ನೋಡಿ !

Published

on

ಸುದ್ದಿದಿನ ಡೆಸ್ಕ್ : ಹಿಂದೆ ಎಂದೂ ನಡೆದಿರದ ವಿಚಿತ್ರವಾದ ಪ್ರಕರಣ ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೊಬ್ಬ ವಿಮಾನವನ್ನೇ ಕಳವು ಮಾಡಿದ್ದಾನೆ.
ಹೌದು, ಅಮೆರಿಕದ ವಾಷಿಂಗ್ಟನ್‌ನ ಅಲಸ್ಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರೋಪ್ಲೇನ್‌ ಮೆಕಾನಿಕ್‌ ವೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳಲು ವಿಮಾನ ಕಳವು ಮಾಡಿದ್ದಾನೆ.
ಮೆಕಾನಿಕ್‌ ಹಾರಿಜಾನ್‌ (29) ಎಂಬಾತಕ್ಯು400 ವಿಮಾನವನ್ನು ಏರ್‌ ಟ್ರಾಫಿಕ್‌ ಕಂಟ್ರೋಲ್‌ ನ ಅನುಮತಿ ಪಡೆಯದೇ ಟೇಕ್‌ ಆಫ್‌ ಮಾಡಿದ್ದು, ಕೆಲ ದೂರ ಹಾರಾಟ ನಡೆಸಿ, ಬಳಿಕ ನೆಲಕ್ಕೆ ಅಪ್ಪಳಿಸುವ ಮೂಲಕ ಸಾವನ್ನಪ್ಪಿದ್ದಾನೆ. ಇದು ಭಯೋತ್ಪಾದನಾ ಕೃತ್ಯ ಅಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Check out @drbmbdgty’s Tweet: https://twitter.com/drbmbdgty/status/1028130383911501824?s=09

Leave a Reply

Your email address will not be published. Required fields are marked *

Trending

Exit mobile version