ದಿನದ ಸುದ್ದಿ

ಮಂಡ್ಯ | ರೈಲ್ವೇಗೇಟ್ ಬಳಿ ನವಜಾತ ಶಿಶು ಪತ್ತೆ : ದಂಪತಿಗಳಿಂದ ರಕ್ಷಣೆ

Published

on

ಸುದ್ದಿದಿನ,ಮಂಡ್ಯ: ರಸ್ತೆ ಬದಿಯಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿದ್ದ ಐದು ದಿನಗಳ ನವಜಾತ ಗಂಡು ಶಿಶುವನ್ನು ದಂಪತಿ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ ಘಟನೆ ಕಲ್ಲಹಳ್ಳಿಯ ರೈಲ್ವೇ ಗೇಟ್ ಬಳಿ ನಡೆದಿದೆ.

ರಂಜಾನ್ ಹಬ್ಬದ ಸಂಭ್ರಮದಲ್ಲಿ ಪ್ರವಾಸ ಹೊರಟಿದ್ದ ದಂಪತಿಗೆ ರಟ್ಟಿನ ಪೆಟ್ಟಿಗೆಯಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಶಬ್ದ ಬಂದ ಕಡೆ ಹೋಗಿ ನೋಡಲಾಗಿ ಪೆಟ್ಟಿಗೆಯಲ್ಲಿ 5 ದಿನಗಳ ನವಜಾತ ಗಂಡು ಶಿಶು ಪತ್ತೆಯಾಗಿದೆ.

ಮೊದಲು ಶಿಶುವನ್ನು ದೇವರು ಕೊಟ್ಟ ಪ್ರಸಾದ ಎಂದು ತಿಳಿದು ದಂಪತಿ ಮನೆಗೆ ಕರೆದುಕೊಂಡು ಹೋಗಿ ಹಾರೈಕೆ ಮಾಡಿದೆ. ಆದರೆ ಕಾನೂನಿಗೆ ಗೌರವ ನೀಡಿ ಮಗವುನ್ನು ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಮಗು ಆರೋಗ್ಯವಾಗಿದ್ದು, ವೈದ್ಯರು ತಪಾಸಣೆ ನಡೆಸಿ ಶಿಶು ಸಂರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಪೋಷಕರಿಗಾಗಿ ಹುಡುಕಾಟವನ್ನು ಸೆಂಟ್ರಲ್‌ ಪೊಲೀಸ್ ಠಾಣೆ ಪೊಲೀಸರು ಮಾಡುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version