ದಿನದ ಸುದ್ದಿ

ಕೊಡಗಿನ ಜನರ ಜೊತೆ ಮಂಡ್ಯ ಜನತೆ: ಸಿ.ಎಸ್.ಪುಟ್ಟರಾಜು

Published

on

ಸುದ್ದಿದಿನ, ಮಂಡ್ಯ| ಅತೀವೃಷ್ಟಿಯಿಂದ ತೊಂದರೆಗೀಡಾದ ಕೊಡಗಿನ ಜನರ ಕಷ್ಟದಲ್ಲಿ ಮಂಡ್ಯ ಜಿಲ್ಲೆಯ ಜನರು ಭಾಗಿಯಾಗಿದ್ದು, ಯಾವುದೇ ಕಾರಣಕ್ಕೂ ಕೊಡಗಿನ ಜನರು ಧೃತಿಗೆಡಬಾರದು ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜರ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಿಂದ ಕೊಡಗಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು. ಆಹ್ವಾರ, ನೀರು, ಹಾಲು, ಹೊದಿಕೆ, ವಸ್ತ್ರಗಳನ್ನು ತಂಡಗಳಾಗಿ ಕೊಡಗಿಗೆ ರವಾನಿಸಲು ತಕ್ಷಣದಿಂದಲೇ ಅಗತ್ಯ ಕ್ರಮವನ್ನು ವಹಿಸಲಾಗುವುದು ಎಂದು ಹೇಳಿದ್ದಾರೆ.

ಕೊಡಗಿನ ಜನರ ಜೊತೆಗೆ ಕರ್ನಾಟಕ ರಾಜ್ಯದ ಪ್ರತಿಯೊಬ್ಬರೂ ಇದ್ದು, ವಿಶೇಷವಾಗಿ ಮಂಡ್ಯ ಜಿಲ್ಲೆಯ ಜನತೆ ಸದಾ ಕೊಡಗಿನ ಜನರ ನೆರವಿಗೆ ಇದ್ದೇ ಇರುತ್ತದೆ ಎಂಬ ಭರವಸೆಯನ್ನು ನೀಡುತ್ತೇವೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version