ರಾಜಕೀಯ

ಮಂಡ್ಯ ಲೋಕಸಭಾ ಉಪಚುನಾವಣೆ : ಕೈ ಕೊಟ್ಟ ಮತಯಂತ್ರ

Published

on

ಸುದ್ದಿದಿನ,ಮಂಡ್ಯ : ಇಂದು ನಡೆಯುತ್ತಿರುವ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಕೆ.ಕೋಡಿಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 20ರಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಒಂದು ಗಂಟೆಗು ಹೆಚ್ಚು ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು.

ನಂತರ ಮತಗಟ್ಟೆ ಅಧಿಕಾರಿಗಳು ಸಹಾಯಕ ಚುನಾವಣಾಧಿಕಾರಿ ಎನ್.ಸಿದ್ದೇಶ್ವರ ರವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಸೆಕ್ಟರ್ ಅಧಿಕಾರಿಯಾದ ಶ್ರೀಕಂಠ ಪ್ರಭು ಮತಯಂತ್ರಗಳನ್ನು ಬದಲಾವಣೆ ಮಾಡಿ ಶಾಂತಿಯುತವಾಗಿ ಮತದಾನ ನಡೆಯಲು ಶ್ರಮಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version