ರಾಜಕೀಯ

ಮಂಡ್ಯ ಲೋಕಸಭಾ ಉಪ ಚುನಾವಣೆ : ಕಬ್ಬು ಬೆಳೆಗಾರರಿಂದ ಮತದಾನ ಬಹಿಷ್ಕಾರ

Published

on

 

: ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಕಬ್ಬು ಕಟಾವು ಕೂಲಿ ಏರಿಕೆ, ಒಂದೇ ಕಂತಿನಲ್ಲಿ ಕಬ್ಬಿನ ಹಣ ನೀಡದಿರುವುದಕ್ಕೆ ರೈತರ ಆಕ್ರೋಶ.ರೈತರ ನೆರವಿಗೆ ಬಾರದ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಧೋರಣೆಗೆ ಖಂಡಿಸಿ ಮತದಾನವನ್ನು ಬಹಿಷ್ಕರಿಸಿದ್ದಾರೆ.

450 ರೂ. ಇದ್ದ ಕಬ್ಬು ಕಟಾವು ದರವನ್ನ ಏಕಾಏಕಿ 650 ರೂ. ಗೆ ಏರಿಕೆ ಮಾಡಿರೋದಕ್ಕೆ ವಿರೋಧ ವ್ಯಕ್ತಪಡಿಸಿ ಸಿರುವ ಅವರು ಕೇಂದ್ರ ಸರ್ಕಾರ ಪ್ರತೀ ಟನ್ ಕಬ್ಬಿಗೆ 2612.50 ರೂ. ನಿಗದಿ ಮಾಡಿದ್ರೂ ಮೊದಲ ಕಂತಿನಲ್ಲಿ 1,500 ರೂ. ನೀಡಲಾಗುತ್ತಿದೆ. ಕಬ್ಬು ಪೂರೈಕೆಯಾಗಿ ಎರಡು ತಿಂಗಳ ಬಳಿಕ ಮೊದಲ ಕಂತಿನ ಹಣ ನೀಡುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳು ಉಳಿಕೆ ಹಣ ನೀಡುವ ಕುರಿತು ರೈತರಿಗೆ ಮಾಹಿತಿ ನೀಡಿರದ ಕಾರಣ‌ ಕಾರ್ಖಾನೆಯ ಈ ರೈತ ವಿರೋಧಿ ನೀತಿ ಖಂಡಿಸಿ ಕಳೆದ 4 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ ರೈತರು. ರೈತರ ಬೇಡಿಕೆ ಈಡೇರಿಕೆಗೆ ಕಾರ್ಖಾನೆ ಆಡಳಿತ ಮಂಡಳಿ ನಿರಾಸಕ್ತಿ ಹೊಂದಿದ್ದು, ರೈತರ ನೆರವಿಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಇದುವರೆಗೂ ನೆರವಿಗೆ ಬಂದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version