ದಿನದ ಸುದ್ದಿ
ಮಂಡ್ಯ | ಪತ್ತೆಯಾಗಿರುವ ಕೊರೋನಾ ಕೇಸ್ ; ಹೆಚ್ಚಿನ ಗಮನ ಹರಿಸುವಂತೆ ಪುರಸಭೆ ಸದಸ್ಯರಿಂದ ಸಚಿವರಿಗೆ ಮನವಿ
ಸುದ್ದಿದಿನ,ಮಂಡ್ಯ: ನೂತನ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆ.ಸಿ. ನಾರಾಯಣಗೌಡ ರವರಿಗೆ ಮದ್ದೂರು ಪಟ್ಟಣದಲ್ಲಿ ಸಮಾಜ ಸೇವಕ ಅಪ್ಪು.ಪಿ.ಗೌಡ ಮತ್ತು ಪುರಸಭಾ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪಡಿತರದಾರರಿಂದ ಕೆಲವು ನ್ಯಾಯಬೆಲೆ ಅಂಗಡಿಗಳು ಒಂದು ಕಾರ್ಡಿಗೆ 30 , 20 ರೂಪಾಯಿ ಹಣವನ್ನು ಪಡೆದು ಅಕ್ಕಿ ವಿತರಣೆ ಮಾಡುತ್ತಿದ್ದಾರೆ , ರಾಜ್ಯ ಸರ್ಕಾರ ಪಟ್ಟಣದ ವಿವಿಧ ಬಡಾವಣೆಗಳಿಗೆ ನೀಡುತ್ತಿರುವ ಹಾಲಿನ ವಿತರಣೆಯಲ್ಲಿಯೂ ಪುರಸಭಾ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಹಾಗೂ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೋನಾ ಕೇಸ್ ಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸದಸ್ಯರು ಮನವಿ ಮಾಡಿದರು.
ಇನ್ನು ಸ್ಥಳದಲ್ಲಿಯೇ ಇದ್ದ ಮದ್ದೂರು ತಾಲ್ಲೂಕು ದಂಡಾಧಿಕಾರಿಗಳಿಗೆ ಸಚಿವರು ಪರಿಶೀಲನೆ ನಡೆಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆದೇಶ ಮಾಡಿದರು.
ಹಾಗೂ ಪ್ರತಿ ದಿನ 1000 ಕ್ಕೂ ಹೆಚ್ಚಿನ ನಿರ್ಗತಿಕರಿಗೆ, ಬಡವರಿಗೆ ಪುರಸಭಾ ಸದಸ್ಯೆ ಮತ್ತು ಸಮಾಜ ಸೇವಕ ಅಪ್ಪು ಗೌಡ ರವರು ಆಹಾರ ಪೊಟ್ಟಣಗಳನ್ನು ಪೂರೈಸುತ್ತಿರುವುದಕ್ಕೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರಿಯಾಂಕಾ ಅಪ್ಪುಗೌಡ , ಮನೋಜ್ , ಸಿದ್ದರಾಜು ,ಕಮಲ್ ನಾಥ್ , ರಾಮು ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243