/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಅಕ್ರಮ ಗಣಿಗಾರಿಕೆ ನಿಲ್ಲಿಸಿ ಕೆ ಆರ್ ಎಸ್ ಜಲಾಶಯ ಉಳಿಸಿ’ ಪಾದಯಾತ್ರೆ

Published

on

ಸುದ್ದಿದಿನ,ಮಂಡ್ಯ : ಅಕ್ರಮ ಗಣಿಗಾರಿಕೆ ನಿಲ್ಲಿಸಿ ಕೆ ಆರ್ ಎಸ್ ಜಲಾಶಯ ಉಳಿಸಿ ಎಂದು ಮೈಸೂರಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆಯನ್ನು ಕೈಗೊಂಡಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮೂರು ದಿನಗಳು ಮುಗಿಸಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ನೆನ್ನೆ ಮಂಡ್ಯದಿಂದ ಹೊರಟ ಕಾರ್ಯಕರ್ತರು ಮದ್ದೂರಿನ ಪ್ರವಾಸಿ ಮಂದಿರದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದರು.

ಇಂದು ಬೆಳಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ರವರು ನಮ್ಮನ್ನು ಅಗಲಿದ್ದಾರೆ ಎಂದು ವಿಷಾದಿಸಿದರು ರಾಜ್ಯಾಧ್ಯಕ್ಷರಾದ ರಮೇಶ್ ಗೌಡ ರವರ ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷ ಮೌನಚರಣೆ ಮಾಡಲಾಯಿತು.

ರಾಜ್ಯಾಧ್ಯಕ್ಷರಾದ ರಮೇಶ್ ಗೌಡ ರವರು ಮಾತನಾಡಿ ಸಮ್ಮಿಶ್ರ ಸರ್ಕಾರದ ಸಚಿವ ಪುಟ್ಟರಾಜು ಸಂಬಂಧಿಕರು ಹಾಗೂ ಬೆಂಬಲಿಗರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು ತಕ್ಷಣವೇ ರಾಜ್ಯ ಸರ್ಕಾರ ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ನಿಷೇದಾಜ್ಞೆ ಹೊರಡಿಸದೆ ಯಂತ್ರೋಪಕರಣಗಳನ್ನು ಖಾಲಿ ಮಾಡಿಸಬೇಕು ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಅಕ್ರಮ ಗಣಿಗಾರಿಕೆ ನಿಷೇಧ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಬಳಿ 50 ಕಿಲೋ ಮೀಟರ್ ಗಣಿಗಾರಿಕೆ ನಿಷೇಧ ಮಾಡಿರುವ ರೀತಿ ಕೆ ಆರ್ ಎಸ್ ಜಲಾಶಯದ ಸುತ್ತ ನಿಷೇಧ ಮಾಡಬೇಕು ಮತ್ತು ರೇಷ್ಮೆ ಬೆಳೆ ಧಾರಣೆ ಕುಸಿತದಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ತಕ್ಷಣವೇ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಿದ ಬೇಕೆಂದು ಒತ್ತಾಯಿಸಿದ್ದರು.

ನಂತರ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಿಂದ ಚನ್ನಪಟ್ಟಣಕ್ಕೆ ಹೊರಟ ಪಾದಯಾತ್ರೆಗೆ ಸವಿತಾ ಸಮಾಜ, ತೆಂಗು ಬೆಳೆಗಾರರ ಸಂಘ, ರೈತಸಂಘ, ವಿಶ್ವಕರ್ಮ ಮಹಾಸಭಾ, ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕಾರ್ಯಕರ್ತರಿಗೆ ಬೆಂಬಲ ನೀಡಿ ಕಾರ್ಯಕರ್ತರಿಗೆ ಸಾಥ್ ನೀಡಿದರು.

ಪಾದಯಾತ್ರೆಯಲ್ಲಿ ಜಿಲ್ಲಾಧ್ಯಕ್ಷರಾದ ಉಮಾ ಶಂಕರ್, ತಾಲ್ಲೂಕು ಅಧ್ಯಕ್ಷರಾದ ತಿಪ್ಪೂರು ರಾಜೇಶ್, ಹಾಗೂ ವೇದಿಕೆಯ ಮುಖಂಡರುಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version