ದಿನದ ಸುದ್ದಿ

ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖಾಂಶಗಳು

Published

on

ಸುದ್ದಿದಿನ,ದೆಹಲಿ : ಸಾರ್ವಕಾಲಿಕ ಶ್ರೇಷ್ಟ ಪ್ರಣಾಳಿಕೆಯನ್ನ ಅಳೆದು ತೂಗಿ ರೂಪಿಸಿದ್ದೇವೆ. ನಾವು ಆಡಿರುವ ಮಾತಿಗೆ ಬದ್ದರಿದ್ದೇವೆ. ನುಡಿದಂತೆ ನಡೆಯುತ್ತೇವೆ ಎಂದು ಕಾಂಗ್ರಸ್ ಮಂಗಳವಾರ ದೆಹಲಿಯಲ್ಲಿ ತನ್ನ‌ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ.

ಪ್ರಣಾಳಿಕೆಯ ಪ್ರಮುಖಾಂಶಗಳು ಹೀಗಿವೆ

  1. ನ್ಯಾಯ್ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ ಜನರನ್ನ ಆರ್ಥಿಕ ಸಮಾನತೆಯತ್ತ ಕೊಂಡೊಯ್ಯಲಾಗುವದು.
  2. ಮಹಿಳೆಯ ಆರ್ಥಿಕ ಸ್ವಾತಂತ್ರ್ಯ ಮೂಡಿಸುವ ನಿಟ್ಟಿನಲ್ಲಿ #ನ್ಯಾಯ್ ಯೋಜನೆಯಡಿ ನೀಡಲಿರುವ 72,000/- ಕುಟುಂಬದ ಮಹಿಳೆಯ ಖಾತೆಗೆ ಜಮಾ ಮಾಡಲಾಗುವದು.
  3. ಜಲ ಸಂರಕ್ಷಣೆ, ಖರಾಬು ಜಮೀನು ಸುಧಾರಣೆ ಮಿಶನ್ ಅಡಿಯಲ್ಲಿ 3ವರ್ಷದಲ್ಲಿ 1ಕೋಟಿ ಉದ್ಯೋಗ ಸೃಷ್ಟಿಸಲಾಗುವದು.
  4. ‘ಮೇಕ್ ಪಾರ್ ದಿ ವರ್ಲ್ಡ್’
    ರಪ್ತು ಹೆಚ್ಚಾಗಿಸುವ ನಿಟ್ಟಿನಲ್ಲಿ ರೂಪಿಸಲಿರುವ ಯೋಜನೆ.
  5. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸದ್ಯದ 100 ದಿನ ಉದ್ಯೋಗವನ್ನ 150 ದಿನಕ್ಕೆ ಏರಿಸಲಾಗುವದು.
  6. ರೈಲ್ವೇಗೆ ಇರುವಂತೆ ಕೃಷಿ ಮತ್ತು ರೈತರಿಗಾಗಿ ವಿಶೇಷ ಬಜೆಟ್ ಮಂಡಿಸಲಾಗುವದು.
  7. 2020 ಮಾರ್ಚ್ ಒಳಗೆ ಕೇಂದ್ರಸರ್ಕಾರದಲ್ಲಿರುವ 4ಲಕ್ಷ ಹುದ್ದೆ,ಸ್ಥಳೀಯ ಸಂಸ್ಥೆಗಳಲ್ಲಿರುವ 10 ಲಕ್ಷ ಹುದ್ದೆ ಭರಿಸಲಾಗುವದು.
  8. ಸ್ಲಮ್ ಸುಧಾರಣೆ ಯೋಜನೆಯಡಿ ಶುದ್ದ ನೀರು, ವಿದ್ಯುತ್, ನೈರ್ಮಲ್ಯಕ್ಕೆ, ಪಕ್ಕಾ ಮನೆ ನಿರ್ಮಿಸಲಾಗುವದು.
  9. ‘ಮನರೇಗಾ’ ವನ್ನ ಸಾರ್ವಜನಿಕ ಆಸ್ತಿಗಳಾದ ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕೊಠಡಿ ನಿರ್ಮಾಣಕ್ಕೆ ಬಳಸಲಾಗುವದು.
  10. ಮನರೇಗಾ 3.0, ಪ್ರಮುಖವಾಗಿ ರೈತರಿಗೆ ತಲೆನೋವಾಗಿರುವ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆಗಾಗಿ ಪರಿಚಯಿಸಲಾಗುವದು.
  11. ಸ್ವಂತ ಮನೆ ಹಕ್ಕಿನಡಿ ನಗರ ವಾಸಿ ಬಡವರ ಮೇಲೆ ನಡೆವ ಸ್ವೆಚ್ಚಾಚಾರದ ತೆರವುಗೊಳಿಸುವಿಕೆ ನಿಲ್ಲಿಸಲಾಗುವದು.
  12. ಸ್ಲಮ್ ಸುಧಾರಣೆ ಯೋಜನೆಯಡಿ ಶುದ್ದ ನೀರು, ವಿದ್ಯುತ್, ನೈರ್ಮಲ್ಯಕ್ಕೆ, ಪಕ್ಕಾ ಮನೆ ನಿರ್ಮಿಸಲಾಗುವದು.
  13. ಸ್ಥಳೀಯ ಸಂಸ್ಥೆಗಳ ಮೇಯರ್ ಮತ್ತು ಪ್ರತಿನಿಧಿಗಳಿಗೆ ಅಧಿಕಾರ ನೀಡುವ ಮೂಲಕ ನಗರಗಳ ಮೂಲಭೂತ ಸೌಕರ್ಯ ಸುಧಾರಣೆ.
  14. ಪ್ರಸ್ತುತ ಖಾಲಿ ಬಿದ್ದಿರುವ 22 ಲಕ್ಷ ಸರಕಾರಿ ಹುದ್ದೆಗಳನ್ನ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ತುಂಬಲಿದ್ದೇವೆ.
    ಕಾಂಗ್ರೇಸ್ ಕೈ ಬಲಪಡಿಸಿ.
  15. ಅಸಂಘಟಿತ ವಲಯದ ಕಾರ್ಮಿಕರಿಗೂ ಕನಿಷ್ಟ ವೇತನ ಸಿಗುವಂತೆ ನಿಯಮ ರೂಪಿಸಲಾಗುವದು.
  16. ‘ಸಣ್ಣ ಹಿಡಯವಳಿದಾರರು&ಕೃಷಿ ಕಾರ್ಮಿಕರ ಆಯೋಗ’ವನ್ನ ಸಂಪ್ರದಾಯಿಕ ಕೃಷಿಯೇತರ ಚಟುವಟಿಕೆದಾರರಿಗೆ ಅನುಕೂಲವಾಗುವಂತೆ ರೂಪಿಸಲಾಗುವದು.
  17. ‘ರಾಷ್ಟ್ರೀಯ ಕೃಷಿ ಬೆಳವಣಿಗೆ ಮತ್ತು ಯೋಜನಾ ಆಯೋಗ’ ವನ್ನು ರೈತರಿಗೆ ನೆರವಾಗಲು ರೂಪಿಸಲಾಗುವದು.
  18. ಕಾಂಗ್ರೇಸ್ ಅಧಿಕಾರಕ್ಕೆ ಏರುತ್ತಿದ್ದಂತೆ ರೈತರ ಸಾಲ ಮನ್ನಾ ಮಾಡಲಾಗುವದು.
  19. 3 ತಿಂಗಳಲ್ಲಿ ಹೂಡಿಕೆಗೆ ಅಡೆತಡೆಯಾಗಿರುವ ಎಲ್ಲ ಕಾಯಿದೆಗಳನ್ನು ತೆಗೆದಾಕಿ, ಹೂಡಿಕೆದಾರ ಸ್ನೇಹಿ ನೀತಿ ರೂಪಿಸಲಾಗುವದು.
  20. ವಿಮಾ ಕಂಪನಿಗಳನ್ನ ಬೆಳೆಸಿದ ಬಿಜೆಪಿಯ ‘ಫಸಲ್ ವಿಮಾ ಯೋಜನೆ’ಯನ್ನ, ತಿದ್ದುಪಡಿ ಮಾಡಿ ರೈತರಿಗೆ ಸಹಾಯ ಆಗುವಂತೆ ರೂಪಿಸಲಾಗುವದು.
  21. ಸಾಲದಿಂದ ಮುಕ್ತಿ’ ಯೋಜನೆಯಡಿಯಲ್ಲಿ ಅನ್ನದಾತನಿಗೆ ಉಳುಮೆಗೆ ಕಾಲಾನುಸಾರ ಬೇಕಾಗುವ ಅವಶ್ಯಕತೆ ನೀಡಲಾಗುವದು.
  22. 2500 ಕ್ಕೂ ಜನಸಂಖ್ಯೆ ಇರುವ ಗ್ರಾಮಗಳಿಗೆ ಕಡ್ಡಾಯವಾಗಿ ಆಶಾ ಕಾರ್ಯಕರ್ತೆಯರನ್ನ ನೇಮಿಸಲಾಗುವದು.
  23. ಎಲ್ಲ ಸರಕಾರಿ ಹುದ್ದೆಗಳ ಆಯ್ಕೆ ಪರೀಕ್ಷೆಗೆ ಇರುವ ಶುಲ್ಕವನ್ನು ಸಂಪೂರ್ಣವಾಗಿ ತೆಗೆಯಲಾಗುವದು
  24. ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಕಾರ್ಯಕರ್ತರ ಬಾಕಿ ಇರುವ ಸಂಬಳವನ್ನ ಅಧಿಕಾರಕ್ಕೆ ಬರುತ್ತಿದ್ದಂತೆ ನೀಡಲಾಗುವದು.
  25. ಜಿ ಎಸ್ ಟಿ 2.0- ಸರಳ ಸುಲಭ ಹೊರೆಯಾಗದಂತೆ ತೆರಿಗೆ ಪದ್ದತಿ ರೂಪಿಸಲಾಗುವದು.
  26. ಜಿ ಎಸ್ ಟಿ 2.0-ಅಡಿಯಲ್ಲಿ ಪೆಟ್ರೋಲ್ ಡೀಸೆಲ್, ತಂಬಾಕು ಉತ್ಪನ್ನ, ಸರಾಯಿ, ರಿಯಲ್ ಎಸ್ಟೇಟ್ ಗಳನ್ನ ತರಲಾಗುವದು.
  27. ರಫ್ತಾಗುವ ವಸ್ತು ತಯಾರಿಕೆ ಘಟಕಗಳಿಕೆ ತೆರಿಗೆ ವಿನಾಯ್ತಿ ಮೂಲಕ ಸರಕಾರದಿಂದ ನೆರವು.
  28. ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವರನ್ನ ನೇಮಿಸಲಾಗುವದು.
  29. ಜಿ ಡಿ ಪಿಯ 2% ನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ವಿನಿಯೋಗಿಸಲಾಗುವದು.
  30. ನೊಂದಾಯಿತವಲ್ಲದ ಉದ್ಯಮಗಳ ಉತ್ಪನ್ನಗಳಿಗೆ ಖರೀದಿದಾರರ ತೆರಿಗೆ ಹಾಕಿದ್ದನ್ನು ತೆಗೆದು ಹಾಕಲಾಗುವದು.
  31. ರಫಾಲೆ ಡೀಲ್ ತನಿಖೆ, ಮತ್ತು 5 ವರ್ಷದಲ್ಲಿ ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರದ ತನಿಖೆ ಮಾಡಲಾಗುವದು
  32. ನೊಂದಾಯಿತವಲ್ಲದ ಉದ್ಯಮಗಳ ಉತ್ಪನ್ನಗಳಿಗೆ ಖರೀದಿದಾರರ ತೆರಿಗೆ ಹಾಕಿದ್ದನ್ನು ತೆಗೆದು ಹಾಕಲಾಗುವದು.
  33. ಲೋಕಪಾಲ್ ನೇಮಕ ಮಾಡಲಾಗುವದು.
  34. ಐಪಿಸಿ ಸೆಕ್ಷನ್ 499ನ್ನು ತೆಗೆದು ಹಾಕಿ, ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಅಪಕೃತ್ಯ ಎಂದು ಮಾಡಲಾಗುವದು.
  35. ಹಳಿ ತಪ್ಪಿಸಿರುವ ಗೊಂದಲಮಯ ‘ನೀತಿ ಆಯೋಗ’ ವನ್ನು ಕಿತ್ತೆಸೆದು ಹೊಸದಾದ ಯೋಜನಾ ಆಯೋಗವನ್ನ ರೂಪಿಸಲಾಗುವದು
  36. ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳಾ ಪ್ರಾತಿನಿದ್ಯ ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನ ಮೊದಲ ಸಭೆಯಲ್ಲಿ ಮಂಡಿಸಲಾಗುವದು.
  37. ಕೇಂದ್ರ ಸರಕಾರದ ಹುದ್ದೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವದು.
  38. ಪ.ಜಾ ಪ.ಪಂ & ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧಿಸಿದಂತೆ ‘ಸಮಾನ ಅವಕಾಶಗಳ ಆಯೋಗ’ವನ್ನ ರಚಿಸಲಾಗುವದು.
  39. ಪ.ಜಾ ಪ.ಪಂ ಮತ್ತು ಹಿಂದುಳಿದ ವರ್ಗಗಳಿಗೆ ಖಾಸಗಿ ವಿದ್ಯಾ ಸಂಸ್ಥೆಗಳಲ್ಲು ಮೀಸಲಾತಿಯನ್ನ ಕಲ್ಪಿಸಲಾಗುವದು.
  40. ಸರಕಾರಿ ಟೆಂಡರುಗಳಲ್ಲಿ ಪ.ಜಾ ಪ.ಪಂ&ಹಿಂದುಳಿದವರಿಗೆ ನ್ಯಾಯಯುತ ಭಾಗ ನೀಡಲಾಗುವದು.
  41. ಸರಕಾರಿ ಟೆಂಡರುಗಳಲ್ಲಿ ಪ.ಜಾ ಪ.ಪಂ&ಹಿಂದುಳಿದವರಿಗೆ ನ್ಯಾಯಯುತ ಭಾಗ ನೀಡಲಾಗುವದು.
  42. ಅಲಿಗರ್, ಜಾಮಿಯಾ ಇಸ್ಲಮಿಯಾ ವಿಶ್ವವಿದ್ಯಾಲಯಗಳ ಮೂಲ ಉದ್ದೇಶವನ್ನ ರಕ್ಷಿಸಲಾಗುವದು.
  43. ವಕ್ಪ್ ಮಸೂದೆ 2014 ನ್ನು ಮತ್ತೊಮ್ಮೆ ಪರಿಚಯಿಸಿ, ವಕ್ಪ್ ಆಸ್ತಿಯನ್ನ ನ್ಯಾಯಯುತ ಟ್ರಸ್ಟಿಗಳಿಗೆ ನೀಡಲಾಗುವದು.
  44. ಮಾಬ್ ಲಿಂಚಿಂಗ್ ಮತ್ತು ಹೇಟ್ ಕ್ರೈಮ್ ತಡಗಟ್ಟಲು ಮೊದಲ ಸಭೆಯಲ್ಲಿಯೆ ಕಾಯಿದೆ ರೂಪಿಸಲಾಗುವದು.

http://manifesto.inc.in/en/index.html?utm_source=FB&utm_medium=FB_banner&utm_campaign=Social+Issues_Kannada_Reach&utm_term=Forest_Reach

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version