ಕ್ರೀಡೆ

ಏಷ್ಯನ್ ಗೇಮ್ಸ್; ಮಂಜಿತ್ ಸಿಂಗ್ ಗೆ 800 ಮೀಟರ ಓಟದಲ್ಲಿ ಚಿನ್ನ

Published

on

ಸುದ್ದಿದಿನ ಜಕಾರ್ತಾ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಓಟಗಾರ ಮಂಜಿತ್ ಸಿಂಗ್ 800 ಮೀಟರ ಓಟದಲ್ಲಿ ತಮ್ಮ ಮುಂದಿನ ಓಟಗಾರ ಜಿನ್ಸನ್ ಜಾನ್ಸನ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಮುಡಿಗೇರಿಸಿಕೊಂವಿದ್ದಾರೆ.

ಭಾರತ ಭರವಸೆಯ ಓಟಗಾರ ಮಂಜಿತ್ ಸಿಂಗ್ 1 ನಿಮಿಷ ಮತ್ತು 46.15 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಮುರಿದ್ದಾರೆ. ಓಟಗಾರ ಜಿನ್ಸನ್ ಜಾನ್ಸನ್ 1: 46.35 ನಿಮಿಷಗಳಲ್ಲಿ 800 ಮೀಟರ್ ಓಡಿ ಶ್ರೀರಾಮ್ ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಜೂನ್ನಲ್ಲಿ ಮುರಿದಿದ್ದರು.

ಈವರೆಗೆ 49 ಪದಕ ಗಳಿಸಿದ್ದು, ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇದರಲ್ಲಿ 9 ಚಿನ್ನ, 18 ಬೆಳ್ಳಿ ಮತ್ತು 22 ಕಂಚಿನ ಪದಗಳಿವೆ.

Leave a Reply

Your email address will not be published. Required fields are marked *

Trending

Exit mobile version