ಸಿನಿ ಸುದ್ದಿ
ರಕ್ಷಿತ್ ಶೆಟ್ಟಿ ಜೊತೆ ಮದುವೆ ಕ್ಯಾನ್ಸಲ್ : ರಷ್ಮಿಕಾ ಮಂದಣ್ಣ ಸ್ಪಷ್ಟನೆ
ಸುದ್ದಿದಿನ ಡೆಸ್ಕ್ : ಕಿರಿಕ್ ಪಾರ್ಟಿ ಸಿನೆಮಾ ಮೂಲಕ ಕನ್ನಡ ಸಿನೆಮಾಗೆ ಎಂಟ್ರಿ ಕೊಟ್ಟು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದರು ರಷ್ಮಿಕಾ ಮಂದಣ್ಣ. ಈ ಸಂದರ್ಭದಲ್ಲಿ ನಟ ರಕ್ಷಿತ್ ಜೊತೆ ಪ್ರೇಮಾಂಕುರವಾಗಿ ನಿಶ್ಚಿತಾರ್ಥ ಕೂಡ ಆಗಿದ್ದು ಹಳೆಯ ವಿಷಯ.
ಆದರೆ ಇತ್ತೀಚೆಗಷ್ಟೇ ಇವರಿಬ್ಬರ ಬ್ರೇಕಪ್ ಸುದ್ದಿ ಸಖತ್ ವೈರಲ್ ಆಗಿತ್ತು. ಯಾರೂ ಕೂಡ ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿರಲಿಲ್ಲ. ರಕ್ಷಿತ್ ಕೂಡ ಏನೂ ಮಾತನಾಡಿರಲಿಲ್ಲ. ಮಂದಣ್ಣ ರ ತಾಯಿಕೂಡ ನಾವೇ ಕೂತು ಒಂದು ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದರು.
ಎಲ್ಲವೂ ಮುಗಿದ ನಂತರ ಈ ವಿಷಯ ತಣ್ಣಗಾಗಿತ್ತು. ಆದರೆ ರಷ್ಮಿಕಾ ತೆಲುಗು ವೆಬ್ಸೈಟ್ ಒಂದಕ್ಕೆ ಕೊಟ್ಟ ಒಂದು ಸಂದರ್ಶನದಲ್ಲಿ “ನಮ್ಮಿಬ್ಬರ ನಡುವೆ ಹಲವು ಭಿನ್ನಾಭಿಪ್ರಾಯಗಳು ಇದ್ದ ಕಾರಣ ನಾವು ಬೇರೆ ಯಾಗುತ್ತಿದ್ದೇವೆ” ಎಂದು ಗಾಸಿಪ್ ಗೆ ತೆರೆ ಎಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401