ದಿನದ ಸುದ್ದಿ

ಮದುವೆ ಸಮಾರಂಭದಲ್ಲಿ ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್ ..!

Published

on

ಸುದ್ದಿದಿನ, ಮೈಸೂರು: ಕೊರೊನಾ ಲಾಕ್‍ಡೌನ್ ಆರಂಭವಾಗಿದ್ದೇ ತಡ, ಚಿತ್ರಮಂದಿರ, ಕಲ್ಯಾಣ ಮಂಟಪ, ಸಾರ್ವಜನಿಕ ಸಭೆ- ಸಮಾರಂಭ ಮಾಡುವವರಿಗೆಲ್ಲ ಆತಂಕ ಶುರುವಾಗಿದೆ.

ಈಗ ಮೈಸೂರಿನಲ್ಲಿ ಕಲ್ಯಾಣ ಮಂಟಪಗಳ ಹೊಸ ನಿಯಮ ಜಾರಿಯಾಗಿದ್ದು, ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಕಲ್ಯಾಣ ಮಂಟಪದ ಮಾಲೀಕರು ಸಹ ಇದಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಬಂದ ಮೇಲೆ ಜೀವನ ಶೈಲಿಯೇ ಬದಲಾಗುತ್ತಿದೆ. ಮೊದಲೆಲ್ಲ ಮದುವೆ, ಹುಟ್ಟುಹಬ್ಬ, ಬೀಗರೂಟ ಹೀಗೆ ಶುಭ ಸಮಾರಂಭಗಳಿಗೆ ಸಂಬಂಧಿಕರೆಲ್ಲ ಸೇರಿ ಸಂಭ್ರಮಿಸುತ್ತಿದ್ದರು.

ಕೊರೊನಾ ಕಾಲಿಟ್ಟ ಬಳಿಕ ಶುಭ ಸಮಾರಂಭಗಳ ಚಿತ್ರಣವೇ ಬದಲಾಗಿ ಹೋಗಿದೆ. ಈ ನಡುವೆ ಮೈಸೂರು ಪೊಲೀಸರು ಕಲ್ಯಾಣ ಮಂಟಪಗಳಿಗೆ ಹೊಸ ಆದೇಶ ಜಾರಿ ಮಾಡಿದ್ದಾರೆ. ಮದುವೆಗಳಿಗೆ ಕೇವಲ 200 ಜನ ಮಾತ್ರ ಇರಬೇಕು.

ಹುಟ್ಟುಹಬ್ಬ, ನಾಮಕರಣದಂತಹ ಸಮಾರಂಭಗಳಿಗೂ ನಿಗದಿಪಡಿಸಿದಷ್ಟು ಜನ ಮಾತ್ರ ಸೇರಬೇಕು. ಹೆಚ್ಚು ಜನರಿದ್ದು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದ್ರೆ, ಕ್ರಿಮಿನಲ್ ಕೇಸ್ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version