ದಿನದ ಸುದ್ದಿ
ಖ್ಯಾತ ರೈತ ಮುಖಂಡ ಮಾರುತಿ ಮಾನ್ಪಡೆ ಕೊರೋನಾಗೆ ಬಲಿ
ಸುದ್ದಿದಿನ ಡೆಸ್ಕ್ : ರೈತ ಮುಖಂಡ, ಹಿರಿಯ ಹೋರಾಟಗಾರರಾದ ಮಾರುತಿ ಮಾನ್ಪಡೆ ಅವರು ಇಂದು ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ.
ಇವರು ಸಿಪಿಎಂ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು.ದಲಿತ ಸಮುದಾಯದವರಾದ ಮಾನ್ಪಡೆ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರನ್ನು ಕಲಬುರಗಿಯಿಂದ ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243