ದಿನದ ಸುದ್ದಿ
ರೆಸಿಪಿ | ‘ಕಡಲೆ ಬೇಳೆಯ ಮಸಾಲೆ ವಡೆ’ ಈಗಲೇ ಮಾಡಿ ಬಿಡಿ
ಬೇಕಾಗುವ ಸಾಮಗ್ರಿಗಳು
- 2 ಕಪ್ ಕಡಲೆ ಬೇಳೆ
- 1 ಇಂಚು ಸುಂಠಿ
- 3 ಹಸಿಮೇಣಸು
- 7/8 ಕರಿಬೇವಿನ ಎಲೆ
- 2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು
- 1 ದೊಡ್ಡ ಗಾತ್ರದ ಈರುಳ್ಳಿ
- 1/4 ಚಮಚೆ ಹಳದಿ
- 1/4 ಚಮಚೆ ಮೇಣಸಿನ ಪುಡಿ
- ಕರಿಯಲು ಬೇಕಾಗುವಷ್ಟು ಎಣ್ಣೆ
ಮಸಾಲೆ ಪುಡಿಗೆಗಾಗಿ ಸಾಮಾಗ್ರಿ
- 2 ಚಮಚೆ ನೆಲಗಡಲೆ ಬೀಜ
- 1 ಟೀ ಸ್ಪೂನ್ ಕೊತಂಬರಿ ಕಾಳು
- 1 ಟೀ ಸ್ಪೂನ್ ಜೀರಿಗೆ
- 10/15 ಕರಿಮೆಣಸು
- 1/4 ಚಮಚೆ ಹಿಂಗು
- 1 ಗುಂಟುರು ಮೇಣಸು
ಇವುಗಳನ್ನೆಲ್ಲ ಒಂದೊಂದಾಗಿ ಹುರಿದುಕೊಂಡು ಮಿಕ್ಸಿಯಲ್ಲಿ ತರಿತರಿಯಾಗಿ ಹುಡಿ ಮಾಡಿಟ್ಟುಕೊಳ್ಳಬೇಕು.
ಮಾಡುವ ವಿಧಾನ
ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಮೂರು ತಾಸು ನೀರಲ್ಲಿ ನೆನೆಸಿ ಇಡಬೇಕು. ಬಳಿಕ ಕಡಲೆ ಬೇಳೆಯ ನೀರನ್ನು ಬಸಿದು ಮುಕ್ಕಾಲು ಕಪ್ ಬೇಳೆಯನ್ನು ಕರಿಬೇವು, ಸುಂಠಿ, ಹಸಿಮೆಣಸಿನೊಂದಿಗೆ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಈಗ ಈ ಮಿಶ್ರಣಕ್ಕೆ ಉಳಿಸಿಟ್ಟ ಕಾಲು ಕಪ್ ಬೇಳೆ ಅದರೊಂದಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಅಕ್ಕಿಹಿಟ್ಟು , ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು , ಮಸಾಲೆ ಪುಡಿ, ಹಳದಿ ,ಕೆಂಪು ಮೆಣಸಿನ ಪುಡಿ , ನಿಂಬೆರಸ ಎಲ್ಲವನ್ನು ಸೇರಿಸಿಕೊಳ್ಳಬೇಕು.
ಮಧ್ಯಮ ಬೆಂಕಿಯ ಮೇಲೆ ದಪ್ಪ ತಳದ ಬಾಣಲೆ ಇಟ್ಟು ಅದಕ್ಕೆ ವಡೆ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಒಂದೊಂದಾಗಿ ಚಪ್ಪಟೆ ಆಕಾರವಾಗಿ ವಡೆಯನ್ನು ಎಣ್ಣೆಗೆ ಬಿಡಬೇಕು. ಎರಡು ಬದಿ ಹೊಂಬಣ್ಣಕ್ಕೆ ತಿರುಗುವ ತನಕ ಹುರಿಯಬೇಕು. ಹೀಗೆ ಗರಿಗರಿಯಾಗಿ ಹುರಿದ ಮಸಾಲೆ ವಡೆ ಸವಿಯುದಕ್ಕೆ ರುಚಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243