ದಿನದ ಸುದ್ದಿ
ದಾವಣಗೆರೆ | ಬೀದಿಗಿಳಿದು ಮಾಸ್ಕ್ ಜಾಗೃತಿ ಮೂಡಿಸಿದ ಡಿಸಿ ಮಹಾಂತೇಶ್ ಬೀಳಗಿ :ಮಾಸ್ಕ್ ಹಾಕದವರಿಗೆ ತರಾಟೆ
ಸುದ್ದಿದಿನ,ದಾವಣಗೆರೆ : ಡಿಸಿ ಮಹಾಂತೇಶ್ ಬೀಳಗಿ ಮತ್ತು ಎಸ್ಪಿ ಹನಮಂತರಾಯ ಅವರು ನಗರದ ಜನತೆಯಲ್ಲಿ ಶುಕ್ರವಾರ ಮಾಸ್ಕ್ ಜಾಗೃತಿ ಮೂಡಿಸಿದರು.
ನಗರದ ಅರಳಿಮರ ಸರ್ಕಲ್ ನಿಂದ ಆರಂಭವಾದ ಅಭಿಯಾನವು ಎಂಸಿಸಿ ಬಿ ಬ್ಲಾಕ್ ಕೊನೆಯಾಯಿತು. 20ಕ್ಕೂ ಹೆಚ್ಚು ಜನರಿಗೆ ದಂಡ ಮಾಸ್ಕ್ ಧರಿಸುವಂತೆ ತಾಕೀತುಮಾಡಿದ ಡಿಸಿ-ಎಸ್ಪಿ ಅವರು ಮಾಸ್ಕ್ ಧರಿಸದೇ ಸುತ್ತಾಡುವವರನ್ನ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಜಂಟಿಯಾಗಿ ಅಭಿಯಾನ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243