ದಿನದ ಸುದ್ದಿ
ಕೋಗಲೂರು ಗ್ರಾಪಂ ಮಾಸ್ಕ್ ಡೇ ದಿನಾಚರಣೆ | ಮಾಸ್ಕ್ ಧರಿಸದೆ ಓಡಾಡಿದರೆ ದಂಡ : ಪಿಡಿಒ ಶೇರ್ ಅಲಿ
ಸುದ್ದಿದಿನ,ಚನ್ನಗಿರಿ : ತಾಲೂಕಿನ ಕೋಗಲೂರು ಗ್ರಾಮ ಪಂಚಾಯತಿ ಆಡಳಿತ ಹಾಗೂ ಆರೋಗ್ಯ ಇಲಾಖಾ ಸಹಭಾಗಿತ್ವದಲ್ಲಿ ಗುರುವಾರ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.
ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಗ್ರಾಪಂ ಸದಸ್ಯರು ಪಿಡಿಒ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದು ಗ್ರಾಪಂ ಕಚೇರಿಯಿಂದ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದ ವರೆಗೆ ಪಾದಯಾತ್ರೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕೊವಿಡ್ -19 ಬರದಂತೆ ತಡೆಯಲು ಸಾರ್ವಜನಿಕರು ಮಾಸ್ಕ ಧರಿಸಬೇಕು, ಸುರಕ್ಷಿತ ಅಂತರ,ಮತ್ತು ಸ್ಯಾನಿಟೈಜರ್ ಬಳಕೆ ಮಾಡಬೇಕು ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರದೆ ಅಗತ್ಯ ಇದ್ದಾಗ ಮಾತ್ರ ಬರಬೇಕು ಮತ್ತು ಕೊರೊನಾ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಬಿ ಶೇರ್ ಆಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ವಿನಾಃ ಕಾರಣ ಮಾಸ್ಕನ್ನು ಧರಿಸದೆ ಓಡಾಡುವುದು ಕಂಡು ಬಂದರೆ ಮುಲಾಜಿಲ್ಲದೆ 200 ದಂಡ ವಸೂಲಿ ಮಾಡಬೇಕಾಗುತ್ತದೆ. ಈ ದಿನ ನಾವುಗಳು ಮಾಸ್ಕನ್ನು ಧರಿಸುವ ಮೂಲಕ ಮಾಸ್ಕ ಡೇ ಆಚರಿಸಿದ್ದೇವೆ. ಜನರು ಮಾಸ್ಕ ಧರಿಸಿ,ಕೊರೊನಾ ವಾರಿಯರ್ಸ ಜೊತೆಗೆ ಸಹಕರಿಸುವ ಮೂಲಕ ಕೊರೊನಾ ಹರಡದಂತೆ ತಡೆಗಟ್ಟಲು ಮತ್ತು ಸ್ವಸ್ಥ ಸಮಾಜಕ್ಕಾಗಿ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಿಜಿ ಸ್ವಾಮಿ , ಶಂಕರಪ್ಪ , ಶಿಕ್ಷಕರುಗಳಾದ ವಿ ಆರ್ ತಿಮ್ಮಪ್ಪ, ರುದ್ರಸ್ವಾಮಿ ಕಾರ್ಯದರ್ಶಿ ಅಲ್ಲಾಭಕ್ಷಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243