ದಿನದ ಸುದ್ದಿ
ಮಾಸ್ಕ್ ದಂಡ ಇಳಿಸಿ ಸಿಎಂ ಯಡಿಯೂರಪ್ಪ ಆದೇಶ : ಹೀಗಿದೆ ಹೊಸ ದಂಡ ಶುಲ್ಕ
ಸುದ್ದಿದಿನ,ಬೆಂಗಳೂರು: ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಮಾಸ್ಕ್ ಹಾಕದೇ ಇರುವವರಿಗೆ ಸಾವಿರ ರೂ ದಂಡವನ್ನು ಇಳಿಸಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಜನತೆ ಮಾಸ್ಕ್ ವಿಚಾರದಲ್ಲಿ ಸ್ಪಂದಿಸದೆ ಇದ್ದ ಕಾರಣ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಇದ್ದವರಿಗೆ ಸಾವಿರ ರೂಪಾಯಿ ದಂಡ ವಿಧಿಸಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದರು.
ಈಗಿನ ದಂಡ ಶುಲ್ಕ
- ನಗರ ಪ್ರದೇಶದ ಜನರಿಗೆ ಸಾವಿರ ರೂ( 1000ರೂ) ಇದ್ದ ದಂಡ ಶುಲ್ಕವನ್ನು ಇನ್ನೂರೈವತ್ತು ರೂ (250) ರೂಗೆ ಇಳಿಸಲಾಗಿದೆ.
- ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಐನೂರು ರೂ (500) ಇದ್ದ ದಂಡ ಶುಲ್ಕವನ್ನು ನೂರು ರೂ (100ರೂ) ಗೆ ಇಳಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243