ದಿನದ ಸುದ್ದಿ

ಮಸ್ಕಿ | ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ

Published

on

ಸುದ್ದಿದಿನ,ಮಸ್ಕಿ: ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಐದು ಗ್ಯಾರಂಟಿ ಹಾಗೂ ಕೇಂದ್ರ ಸರ್ಕಾರ ಒಂದು ಲಕ್ಷರೂ ಮಹಿಳೆಯರ ಖಾತೆಗೆ ಹಾಕುವ ಘೋಷಣೆ ಜೊತೆಗೆ ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಕೊಪ್ಪಳ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು ಕೊಪ್ಪಳದಲ್ಲಿ ಬಿಜೆಪಿ ಸೋತಿರಬಹುದು, ಆದರೆ, ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಆಗುವುದನ್ನು ತಡೆಯುವಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಇಂಡಿ ಕೋಟ ವಿಫಲವಾಯಿತು ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಸ್ಕಿ ಕ್ಷೇತ್ರ ಪಾತ್ರ ಪ್ರಮುಖವಾಗಿತ್ತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಾಂಗ್ರೆಸ್ ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಬಂದರು. ಅವರಿಗೆ ಉಪ ಚುನಾವಣೆಯಲ್ಲಿ ಸೋಲಾಯಿತು, ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಹಿನ್ನಡೆ ಅನುಭವಿಸಿದರು.

ಪ್ರತಾಪಗೌಡರ ಬಗ್ಗೆ ಪಕ್ಷಕ್ಕೆ ಗೊತ್ತಿದೆ ಎಂಎಲ್ ಸಿ ಮಾಡಿ ಸಚಿವರನ್ನಾಗಿ ಮಾಡಬೇಕಾಗಿತ್ತು. ಆನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಅವರಿಗೆ ಉತ್ತಮ ಭವಿಷ್ಯ ಇದೆ. ಅವರಿಗೆ ಸೂಕ್ತ ಸ್ಥಾನಮಾನ ಪಕ್ಷ ನೀಡಲಿದೆ ಎಂದರು. ಚುನಾವಣೆಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ದುಡಿದ್ದಾರೆ. ಸೋಲಿನಿಂದ ಹತಾಸೆ ಬೇಡಾ. ಮುಂಬರುವ ಚುನಾವಣೆಯಲ್ಲಿ ಮತ್ತೆ ಪಕ್ಷಕ್ಕೆ ಜಯ ತರೋಣ ಎಂದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಕೆಲವೊಂದು ಕಾರಣಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಹಿನ್ನೆಡೆಯಾಗಿದೆ. ರಾಜಕೀಯ ಇಂದ ಸ್ವಲ್ಪ ದಿನ ದೂರ ಇರಬೇಕೆಂದು ಮಾಡಿದ್ದೆ ಆದರೆ ಪಕ್ಷದ ಮುಖಂಡರು ಎಲ್ಲರೂ ತೇರಿ ರಾಜಕೀಯದಿಂದ ದೂರ ಉಳಿಯುವುದು ಬೇಡ ರಾಜಕೀಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ ಸದ್ದು ನಿಮಗೆ ಸೋಲಾಗಿರಬಹುದು ಮುಂದಿನ ದಿನದಲ್ಲಿ ಬಿಜೆಪಿಗೆ ಮತ್ತು ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತೇನೆ ಎಂದು ಪಕ್ಷದ ಮುಖಂಡರು ನನಗೆ ಧೈರ್ಯ ಹೇಳಿದ ಮುಖಂಡರಿಗೆ ಧನ್ಯವಾದಗಳು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಲು ಈಗಿನಿಂದಲೇ ಪಕ್ಷ ಬಲಪಡಿಸಲಾಗುವುದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಸತತ ಸೋಲದಾಗ ಮನಸ್ಸಿಗೆ ನೋವಾಗುತ್ತದೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಸಹ ಜನರು ಬಿಟ್ಟಿ ಗ್ಯಾರಂಟಿಗಳಿಗೆ ಮನಸೋತಿದ್ದಾರೆ ಎಂದರು,

ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ಮುಖಂಡ ಬಸವಂತರಾಯ ಕುರಿ, ಅರಳಹಳ್ಳಿ, ವಿಶ್ವನಾಥ ರೆಡ್ಡಿ ಅಮಿನಗಡ, ಮಲ್ಲಪ್ಪ ಅಂಕುಶದೊಡ್ಡಿ, ಯಲ್ಲೋಜಿರಾವ್ ಕೋರೆಕರ್, ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಉದ್ಬಾಳ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version