ದಿನದ ಸುದ್ದಿ

ಅರಣ್ಯ ಭೂಮಿ ಒತ್ತುವರಿ ಆರೋಪ ; ಮಸ್ಕಿ ತಹಶೀಲ್ದಾರರಿಗೆ ನೋಟಿಸ್

Published

on

  • ವಿಶೇಷ ವರದಿ : ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ, ಅಂತರಗಂಗೆ

ಸುದ್ದಿದಿನ,ಮಸ್ಕಿ :ಕೋಟಿಗಟ್ಟಲೆ ಬೆಲೆ ಬಾಳುವ ರಕ್ಷಿತ ಅರಣ್ಯ ಪ್ರದೇಶದ 16 ಎಕರೆ ಜಮೀನು ಖಾಸಗಿಯವರಿಗೆ ಅಕ್ರಮ ಪಟ್ಟಾಮಾಡಿ ಪಹಣಿಯಲ್ಲಿ ನಮೂದಿಸಿರುವುದಕ್ಕೆ ಸಹಾಯಕ ಆಯುಕ್ತರ ಕೋರ್ಟನಿಂದ ಮಸ್ಕಿ ತಹಸೀಲ್ದಾರವರಿಗೆ ಇದೇ 25 ರಂದು ಹಾಜರಾಗಲು ನೋಟಿಸ್ ಜಾರಿಯಾಗಿದೆ.

ಮಸ್ಕಿ ತಾಲೂಕಿನ ತಲೆಖಾನ ಹೊಬಳಿಯ ಬಗ್ಗಲಗುಡ್ಡ ಗ್ರಾಮದ ಸರ್ವೇನಂ 28ವಿಸ್ತಿರ್ಣ447.3 ಎಕರೆ ಪೈಕಿ ಒಟ್ಟು 16 ಎಕರೆ ಕ್ಷೇತ್ರ ಅರಣ್ಯ ಭೂಮಿಯನ್ನು ಯರದೋಡ್ಡಿ ತಾಂಡಾದ ಜನರಿಗೆ ಮರುಹಂಚಿಕೆ ಮಾಡಿ ತಹಸಿಲ್ದಾರ ಮಸ್ಕಿ ಇವರು ವರ್ಗಾವಣೆ ಸಂಖ್ಯೆಎಚ್-9/2023-24 23-2-2024ರಂದು ಮರು ಹಂಚಿಕೆ ಮಾಡಿರುವುದಾಗಿದೆ.

ಲಿಂಗಸುಗೂರ ವಲಯ ಅರಣ್ಯಾಧಿಕಾರಿಗಳು ಪ್ರಾದೇಶೀಕ ವಲಯವರು ಮಸ್ಕಿ ತಹಶೀಲ್ದಾರ ಸೇರಿದಂತೆ 8 ರೈತರ ವಿರುದ್ದ11-6-2024ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮೇಲಮನವಿ ಸಲ್ಲಿಸಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 8ಜನರಿಗೆ ಮರುಹಂಚಿಕ ಮಾಡಿದ್ದು ರದ್ದುಪಡಿಸಲು ಕೋರಿದ್ದಾರೆ.

ಅರಣ್ಯ(ಸಂರಕ್ಷಣಾ ) ಕಾಯ್ದೆ 1980 ರ ಕಲಂ2ಪ್ರಕರ ಕೇಂದ್ರ ಸರಕಾರದ ಪೂರ್ವ ಅನುಮತಿ ಇಲ್ಲದೆ ಯಾವದೆ ವರ್ಗದ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಬಳಸಿಕೊಳ್ಳಲು ಅವಕಾಶ ವಿರುವುದಿಲ್ಲ. ಅರಣ್ಯವೆಂಬ(ಯಾವುದೆ ವರ್ಗದ) ಭೂಮಿಗಳಿಗೆ ಸಂಭದಿಸಿದತೆ ಘನಸರ್ವೋಚ್ಚ ನ್ಯಾಯಲಯದ ರಿಟ್ಟಿ ಪಿಟೇಷನ( ಸಿವಿಲ್) ಸಂಖ್ಯ 202/1995ರ ಜಾರಿಗೆ ಬಂದಿದೆ.

ಅರಣ್ಯ ಕಾನೂನು ಉಲ್ಲಂಘಿಸಿದ್ದಲ್ಲದೆ ಮೇಲಾಧಿಕಾರಿಗಳ ಗನಮಕ್ಕೆ ತರದೆ ಹಲವಾರು ವರ್ಷಗಳ ನಂತರ ಮಸ್ಕಿ ತಹಶೀಲ್ದಾರ ಅರಣ್ಯ ಭೂಮಿ ಹಂಚಿಕೆ ಮಾಡಿದ್ದು ಸಂಶಯಕ್ಕೆ ಎಡೆಮಾಡಿದೆ. ಈ ಕೃತ್ಯದಲ್ಲಿ ಸಂಬಂಧಿಸಿದ ಕಂದಾಯ ನಿರೀಕ್ಷರಾಗಲಿ ಗ್ರಾಮಲೆಕ್ಕಿಗರಗಲ್ಲಿ ಸೂಕ್ತ ವರದಿ ಪಡೆಯದೆ ಕ್ರಮಕ್ಕೆ ಮುಂದಾದ್ದಾರೆಂದು ಹೇಳಲಾಗುತ್ತಿದ್ದು ಸದರಿ ತಹಸೀಲ್ದಾರ ಹಾಗೂ ಕಂದಾಯ ಸಿಬ್ಬಂದಿ ಕಛೇರಿಯ ಸಹಾಯಕರು ಅಕ್ರಮದಲ್ಲಿ ಶಾಮಿಲಾಗಿರುವುದರ ಬಗೆಗೆ ಈಗ ಚರ್ಚೆ ವಿಷಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version