ದಿನದ ಸುದ್ದಿ

ಮಸ್ಕಿ | ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Published

on

ಸುದ್ದಿದಿನ,ಮಸ್ಕಿ : ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪ್ರತಾಪ್ ಗೌಡ ಪಾಟೀಲ್ ಅವರು ಮಾತನಾಡಿದರು ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ, ಜನಸಾಮಾನ್ಯರ ವಿರೋಧಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಕಡಿಮೆ ಆಗುವರೆಗೂ ಹೋರಾಟ ಮಾಡುತ್ತೇವೆ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂತೋಷ ರಾಜಗುರು, ಪಕ್ಷದ ಹಿರಿಯ ಮುಖಂಡರಾದ ಬಸವರಾಜ್ ಸ್ವಾಮಿ ಹಸ್ಮಕಲ್ ಮಂಡಲ ಪ್ರಧಾನ ಕಾರ್ಯದರ್ಶಿಗಳು ರಮೇಶ್ ಉದ್ಬಾಳ್ ಬಸವರಾಜ್ ಗುಡಿಹಾಳ, ವಿವಿಧ ಮೋರ್ಚಾ ಅಧ್ಯಕ್ಷರುಗಳು, ರೈತ ಮೋರ್ಚಾ ಅಧ್ಯಕ್ಷರಾದ ವೆಂಕಣ್ಣ ಸಾಹುಕಾರ್ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ರಮೇಶ್ ತೀರ್ಥಭಾವಿ.

ಎಸ್ಸಿ ಮೋರ್ಚಾ ಅಧ್ಯಕ್ಷರಾದ ರವಿ ಕುಮಾರ್ ಬೆಳನೂರ್ ಪಕ್ಷದ ಮುಖಂಡರು ಅಜಯ್ ದಣಿ ನಾಡಗೌಡ, ಅಮರೇಶ್ ಗಚ್ಚಿನಮನೆ ವೆಂಕನಗೌಡ ಹಡಗಲಿ ಅಭಿಜಿತ್ ಮಾಲಿ ಪಾಟೀಲ್ ಮೌನೇಶ್ ನಾಯಕ್ ಮಲ್ಲಣ್ಣ ರೇಣುಕಿ ಆಲಾಪುರ್, ಶರಣಯ್ಯ ಗುರುದೂರ್ ಗೋವಿಂದಪ್ಪ ರಂಗಾಪುರ್ ಡಾಕ್ಟರ್ ವೆಂಕಟೇಶ್ ಕೊಳಬಾಳ್, ಪಂಪಾಪತಿ ಹೂವಿನ ಬಾವಿ,ವೆಂಕಟರೆಡ್ಡಿ ಹೂವಿನ ಬಾವಿ ಮಹಾಂತೇಶ್ ಪಾಟೀಲ್ ಗುಡುದೂರ್ ಪ್ರಕಾಶ ಗೌಡ ಸುಂಕನೂರ್ ಅಮರಯ್ಯ ಸ್ವಾಮಿ ತೋರಣದಿನ್ನಿ ಅಂಬರೀಶ್ ಮದಿಕಿನಾಳ ಶಿವಕುಮಾರ್, ಆದನ ಗೌಡ ವಟಗಲ್, ಬಸನಗೌಡ ಬಸಾಪುರ್ ಪುರಸಭೆ ಸದಸ್ಯರು ಮಲ್ಲಿಕಾರ್ಜುನ್ ಬ್ಯಾಳಿ, ಸುರೇಶ್ ಹರಸೂರ್, ಮೌನೇಶ್ ಮುರಾರಿ, ಮಲ್ಲಯ್ಯ ಅಂಬಾಡಿ, ಭರತ್ ಕುಮಾರ್ ಶೇಟ್ ಡಾಕ್ಟರ್ ಸಂತೋಷ್ ಪಕ್ಷದ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಿಜೆಪಿಯ ಮುಖಂಡರು ಭಾಗವಹಿಸಿದ್ದರು.

ಮಸ್ಕಿ ಬಿಜೆಪಿ ಮೊದಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಅವರು ಪ್ರತಿಭಟನೆಯ ಕುರಿತು ಮಾತನಾಡಿದರು ಕಾಂಗ್ರೆಸ್ ನೇತೃತ್ವ ಸರಕಾರದ ವಿರುದ್ಧ ಜನಸಾಮಾನ್ಯರಿಗೆ ಮಧ್ಯಮ ಜನಾಂಗದವರಿಗೆ ಆಗುವ ತೊಂದರೆಗಳು

1) ರಾಜ್ಯದ‌ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಕೊಡುವ ನೆಪದಲ್ಲಿ ರಾಜ್ಯದ ಬಡವರ ಮೇಲೆ ತೆರಿಗೆ ಹಾಕಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವ ಮೂಲಕ ರಾಜ್ಯದ ಸಾಮಾನ್ಯ ಜನತೆಗೆ ದ್ರೋಹ ಮಾಡುತ್ತಿದೆ.

2) ಗ್ಯಾರೆಂಟಿ ಗಳ ಹೆಸರಿನಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ರಾಜ್ಯದ ಪ್ರಗತಿ ಶೂನ್ಯವಾಗಿದೆ.

3) ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು ಇದನ್ನು ಸರಿಪಡಿಸಲು ಹಲವಾರು ವರ್ಷ ಬೇಕು. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದೆ.

4) ಸಾಮಾನ್ಯರ ಮೇಲೆ ಹೊರೆ ಹಾಕಿ ಬೇರೆ ರಾಜ್ಯಗಳಿಗೆ ವ್ಯಾಪಾರ ತೊಂದರೆಯಾಗುತ್ತದೆ ಎಂದು ಹೇಳಿ ಪಕ್ಕದ ರಾಜ್ಯಗಳ ಮಿತ್ರ ಪಕ್ಷಗಳ ಹಿತ ಕಾಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿರುವುದು ರಾಜದ್ರೋಹ ಮಾಡಿದಂತೆ.

5) ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪೆಟ್ರೊಲ್, ಡಿಸೇಲ್ ದರ ಕಡಿಮೆ‌ ಇದೆ ಎಂದು ಬಡವರ ಮೇಲೆ ಭಾರ ಹಾಕುವುದು ಯಾವ ನ್ಯಾಯ ? ದರ ಏರಿಕೆ ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿಯವರ ಹೇಳಿಕೆ ಜನ ವಿರೋಧಿಯಾಗಿದೆ.

6) ಉಚಿತ ಗ್ಯಾರೆಂಟಿ ಕೊಡುತ್ತಿರುವುದಾಗಿ ಹೇಳಿ ಬಡವರ ಮೇಲೆ ತೆರಿಗೆ ಹಾಕಿ ಅವರಿಂದಲೇ ಹಣ ಸುಲಿದು ಕಾಂಗ್ರೆಸ್ ರಾಜಕೀಯ ಲಾಭ‌ ಮಾಡಿಕೊಳ್ಳುವುದು ಯಾವ ನ್ಯಾಯ. ಎಂದು ಶರಣಬಸವ ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version