ದಿನದ ಸುದ್ದಿ

ಅಂತರಗಂಗೆ ಶ್ರೀಮತಿ ಲಲಿತಾ ವಿರೂಪಾಕ್ಷಯ್ಯ ಸ್ವಾಮಿ ಅವರಿಗೆ ಒಲಿದು ಬಂದ ಚಂದರಗಿ ಚೆಂದ ರಾಜ್ಯ ಪ್ರಶಸ್ತಿ

Published

on

ಸುದ್ದಿದಿನ,ಮಸ್ಕಿ:ತಾಲೂಕಿನ ಅಂತರಂಗಿ ಗ್ರಾಮದ. ಶ್ರೀಮತಿ ಲಲಿತಾ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಇವರಿಗೆ 2024ರ ಚಂದರಗಿಯ ಚಂದ ದಂಪತಿ ರಾಜ್ಯ ಪ್ರಶಸ್ತಿ ಆಯ್ಕೆಯಾಗಿದ್ದಾರೆಂದು ತಪಭೂಷಣ ತಪ್ಪು ರತ್ನ ಶ್ರೀ ಪೂಜ್ಯ ವೀರಭದ್ರ ಮಹಾ ಶಿವಾಚಾರ್ಯ ದೇವರು. ಎಂ ಚಂದರಗಿ ಕಟಕೋಳ್ ತಿಳಿಸಿದರು.

ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಗುರು ಶಿಷ್ಯರ ಭಾಂದವ್ಯ ಸಮ್ಮಿಲನ ಕಾರ್ಯಕ್ರಮ ಜರುಗಲಿದ್ದು. ಈ ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರು ಪೂಜ್ಯರು ಡಾಕ್ಟರ್ ಪೂಜ್ಯ ಶಿವಲಿಂಗ ಶಿವಾಚಾರ್ಯ ದೇವರು ಸೇರಿದಂತೆ .ಹಾಗೂ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆ ರಂಗಕ್ಕೆ ತನ್ನದೇ ಆದ ಇತಿಹಾಸವಿದ್ದು. ಅಂತಹ ನಿಟ್ಟಿನಲ್ಲಿ ಮಾಧ್ಯಮ ರಂಗದಲ್ಲಿ ಹೆಸರು ಮಾಡಿರುವ ಶ್ರೀಮತಿ ಲಲಿತಾ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ. ಅವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ದೊರಕಿದೆ.

ಇದು ದಂಪತಿಗಳ ಎರಡನೆಯ ರಾಜ್ಯ ಪ್ರಶಸ್ತಿ ವಾಗಿದ್ದು
ಈ ಪ್ರಶಸ್ತಿಗೆ ಶ್ರೀ ಮಾತೆ ಮಂಜಮ್ಮ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ನನ್ನ ಆರಾಧ್ಯ ದೈವ ವರ ರುದ್ರಮುನಿ ಶಿವಾಚಾರ್ಯ ದೇವರು ಮಸ್ಕಿ ಹಾಗೂ ಆತ್ಮೀಯ ಸ್ನೇಹಿತ ಬಂಗ್ಲೆ ಮಲ್ಲಿಕಾರ್ಜುನ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಶ್ರೀಮತಿ ಅವನಿಕ ಎಸ್ ನಾಗರತ್ನ ಕಿರುತೆರೆ ಚಿತ್ರನಟಿ ಸಂಪಾದಕರು ಹಾಗೂ ಶ್ರೀಮತಿ ಸುಕನ್ಯ ಪ್ರಾಧ್ಯಾಪಕಿ ಹರಿಹರ ಪತ್ರಕರ್ತರು ಶಿಕಾರಿಪುರದ ಕುಮಾರಿ ವೀಣಾ ಹಿರೇಮಠ ನ್ಯಾಯಾ ವಾದಿಗಳು ಶ್ರೀಮತಿ ಸೌಮ್ಯ ಶ್ರೀ ಹಿರೇಮಠ ಹಿರಿಯ ಸಾಹಿತಿಗಳು ಬೆಂಗಳೂರು ಶ್ರೀಮತಿ ಡಾಕ್ಟರ್ ಶ್ರೀದೇವಿ ಲಕ್ಕುಂಡಿ ಪ್ರಾಧ್ಯಾಪಕ ಕಾನೂನು ಮಹಾವಿದ್ಯಾಲಯ ಹಿರಿಯ ಸಾಹಿತಿಗಳು ಜಮಖಂಡಿ ಶ್ರೀಮತಿ ಅನಿತಾ ಮಂತ್ರಿ ಜಿಲ್ಲಾಧ್ಯಕ್ಷರು ರಾಯ್ಚೂರ್ ಮಸ್ಕಿಯ ಜಂಗಮ ಸಮಾಜದ ಅಧ್ಯಕ್ಷರು ಶ್ರೀ ಕರಿಬಸಯ್ಯಸ್ವಾಮಿ ಸಿಂಧನೂರ್ ಮಠ ಹಾಗೂ ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ ಹಾಗೆ ಅನೇಕರು ಈ ಪ್ರಶಸ್ತಿಗೆ ಶುಭ ಹಾರೈಸಿದ್ದಾರೆ.

ಇದೇ ತಿಂಗಳು 20ನೇ ತಾರೀಕಿಗೆ ರಾಮದುರ್ಗ ತಾಲೂಕಿನ ಸುಕ್ಷೇತ್ರ ಎಂ ಚಂದಮಠದಲ್ಲಿ ಪ್ರತಿಭಾ ಪುರಸ್ಕಾರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗುವುದು.ಶ್ರೀಗಳ ಆಶೀರ್ವಾದದಿಂದ ಹಾಗೂ ಆತ್ಮೀಯ ಸ್ನೇಹಿತ ಮಹಾಂತೇಶ್ ಪಟ್ಟಣಶೆಟ್ಟಿ ರತ್ನಮ್ಮ ಪಟ್ಟಣಶೆಟ್ಟಿ ಅವರಿಗೂ ಸಹ ಚಂದರಗಿ ಚೆಂದ ಪ್ರಶಸ್ತಿ ಲಭಿಸಿದ್ದು ಅವರಿಗೂ ಕೂಡ ಪ್ರತಿಭಾ ಪುರಸ್ಕಾರ ಶ್ರೀಗಳಾ ಆಶೀರ್ವಾದವಿದ್ದು.

ಈ ಕಾರ್ಯಕ್ರಮಕ್ಕೆ ಶ್ರೀ ಮಠದ ಶಿಷ್ಯಂದಿರು ಹಾಗೂ ಕಡಕೋಳ ಸಂಸ್ಥಾನ ಹಿರೇಮಠದ ಶಿಷ್ಯಂದಿರು ಬಾಘೂಜಿ ಕೊಪ್ಪದ ಶಿಷ್ಯಂದರು ಮತ್ತು ಶ್ರೀಗಳು ದಿದ್ದಿಗಿ ಅಂತರಗಂಗೆ ಗ್ರಾಮದ ಸರ್ವ ಸದ್ಭಕ್ತರು ಶ್ರೀಗಳ ಕೃಪೆಗೆ ಪಾತ್ರರಾಗಿ ಪುನೀತರಾಗಬೇಕೆಂದು ಶ್ರೀಗಳ ಶಿಷ್ಯಂದಿರಾದ ನಡೆಹಳ್ಳಿ ಶಿಕ್ಷಕರು ಸರ್ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ತನು ಮನ ಧನದಿಂದ ಶ್ರೀಗಳ ಕಾರ್ಯಕ್ರಮಕ್ಕೆ ನೀವು ಬನ್ನಿ ಬರವರನ್ನು ಕರೆತನ್ನಿ ಗುರು ಶಿಷ್ಯರ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಗುರುಗಳ ಕೃಪೆಗೆ ಪಾತ್ರರಾಗಿ ರಾಜ್ಯ ಪ್ರಶಸ್ತಿ ದೊರಕಿರುವ ಚಂದರಗಿ ಚೆಂದ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಮತಿ ಲಲಿತಾ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಇವರನ್ನು ಅಭಿನಂದಿಸಿ ಶ್ರೀಗಳ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಿ ಎಂದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version