ರಾಜಕೀಯ
ಕಾಂಗ್ರೆಸ್ ನಲ್ಲಿ ಭಾರೀ ಭಿನ್ನಮತ ಸ್ಪೋಟ
ಸುದ್ದಿದಿನ ಡೆಸ್ಕ್ | ಕಾಂಗ್ರೆಸ್ ನಲ್ಲಿ ಭಾರೀ ಭಿನ್ನಮತ ಸ್ಪೋಟವಾಗುರುವ ಹಿನ್ನೆಲೆ ರಾಹುಲ್ ಭೇಟಿಗೆ ಅವಕಾಶ ಕೋರಿ 13 ಶಾಸಕರಿಂದ ಆಗಸ್ಟ್ 13 ರಂದು ಬೀದರ್ ಗೆ ಬರಲಿರೋ ರಾಹುಲ್ ಗಾಂಧಿಯವರ ಭೇಟಿಗೆ ಶಾಸಕರ ಪ್ರತ್ಯೇಕ ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿಮಾಡಿದ್ದಾರೆ.
ರಾಹುಲ್ ಗಾಂಧಿ ಬೀದರ್ ನಲ್ಲಿ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವರ ನೇಮಕದ ಸಂಧರ್ಭ ಶಾಸಕರ ಬಳಿ ಅವರು ಚರ್ಚಿಸಿಲ್ಲ. ಸಮನ್ವಯ ಸಮಿತಿಯಲ್ಲೂ ಉಸ್ತುವಾರಿ ಸಚಿವರ ನೇಮಕಾತಿ ಚರ್ಚೆಯಾಗಿಲ್ಲ.ಕೆಪಿಸಿಸಿ ಅಧ್ಯಕ್ಷರಿಗೂ ಮಾಹಿತಿ ನೀಡದೆ ಉಸ್ತುವಾರಿ ನೇಮಕಮಾಡಿದ್ದಾರೆ.
ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಹಿಡಿತವೇ ಇಲ್ಲದಂತಾಗಿದ್ದು, ಹೊಸ ದೂರುಗಳ ಜೊತೆ ರಾಹುಲ್ ಭೇಟಿಗೆ ಮನವಿ ಮಾಡಿದ್ದಾರೆ ಕಾಂಗ್ರೆಸ್ ಶಾಸಕರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401