ದಿನದ ಸುದ್ದಿ

‘ಲಂಚಾವತಾರ’ ಸೂತ್ರಧಾರ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ

Published

on

ಸುದ್ದಿದಿನ, ಬೆಂಗಳೂರು : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಹಿರಿಯ ನಟ,ನಾಟಕಕಾರ ಮಾಸ್ಟರ್ ಹಿರಣ್ಣಯ್ಯ (85) ಗುರುವಾರ (ಇಂದು) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿರುವ ಹಿರಣ್ಣಯ್ಯಅವರು, ಸಮಕಾಲೀನ ಸಾಮಾಜಿಕ ,ರಾಜಕೀಯ ವಿದ್ಯಾಮಾನಗಳನ್ನು ತಮ್ಮ ನಾಟಕದ ವಸ್ತುವಾಗಿಸಿಕೊಂಡು, ಹರಿತವಾದ ಸಂಭಾಷಣೆಯ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಂಗ್ಯದ ಮೂಲಕ ಹೇಳುತ್ತಿದ್ದರು.

ಲಂಚಾವತಾರ ನಾಟಕದ ಮೂಲಕ ಕರ್ನಾಟಕ ದಾದ್ಯಂತ ಮನೆಮಾತಾದ ಹಿರಣ್ಣಯ್ಯ ಅವರು ಲಂಚ ಸಾಮ್ರಾಜ್ಯ, ದರ್ಶನ್ ಅಭಿನಯದ ಗಜ, ಸುದೀಪ್ ನಿರ್ದೇಶನದ, ನಂ73 ಶಾಂತಿ‌ ನಿವಾಸ ಸೇರಿದಂತೆ 31 ಸಿನೆಮಾಗಳಲ್ಲಿ‌ ನಟಿಸಿದ್ದಾರು. ಗುಬ್ಬಿ ವೀರಣ್ಣ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿದ್ದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version