ದಿನದ ಸುದ್ದಿ
‘ಮಾತೆ ಮಾಹಾದೇವಿ’ ಇನ್ನಿಲ್ಲ..!
ಸುದ್ದಿದಿನ,ಬೆಂಗಳೂರು: ಕೂಡಲಸಂಗಮದ ಬಸವಗುರು ಪೀಠದ ಅಧ್ಯಕ್ಷೆ ಮಾತೆ ಮಾಹಾದೇವಿ (73) ಲಿಂಗೈಕ್ಯರಾಗಿದ್ದಾರೆ. ಕಿಡ್ನಿ ಹಾಗೂ ಬಹು ಅಂಗಾಗ ವೈಫಲ್ಯದಿಂದ ಬಲಳುತ್ತಿದ್ದ ಅವರು ಇಂದು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ನಗರದ ರಾಜಾಜಿನಗರದ ಬಸವ ಮಂಟಪದಲ್ಲಿ ಅರ್ಧ ಗಂಟೆ ಕಾಲ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ನಾಳೆ ಕೂಡಲಸಂಗಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401