ದಿನದ ಸುದ್ದಿ

ಕಾಯಕವು ಉತ್ಪನ್ನ ಮೂಲವಾದ ಸುಖಿ ಸಮೃದ್ಧ ಸಮಾಜವನ್ನು ನಿರ್ಮಾಣ ಮಾಡುತ್ತದೆ : ಎಂ. ಜಿ. ಈಶ್ವರಪ್ಪ

Published

on

ಸುದ್ದಿದಿನ, ದಾವಣಗೆರೆ : ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಮತ್ತೆ ಕಲ್ಯಾಣ ಎಂಬ ಕಾರ್ಯಕ್ರಮದಲ್ಲಿ, ಡಾಕ್ಟರ್ ಎಂ.ಜಿ. ಈಶ್ವರಪ್ಪನವರು “ಶರಣರ ದೃಷ್ಟಿಯಲ್ಲಿ ಕೃಷಿ” ಎಂಬ ವಿಷಯವನ್ನು ಕುರಿತು ಉಪನ್ಯಾಸವನ್ನು ನೀಡಿದರು.

ಪ್ರಸ್ತುತ ಸಮಾಜದ ಇಂದಿನ ತಳಮಳಕ್ಕೆ ಮತ್ತೆ ಕಲ್ಯಾಣಕಲ್ಯಾಣದಂತಹ ಕಾರ್ಯಕ್ರಮ ಜ್ಞಾನ ಶೀಲ, ಚಲನಶೀಲ ಕಾರ್ಯಕ್ರಮವಾಗಿ ಜನರಿಗೆ ನೆಮ್ಮದಿಯನ್ನು ನೀಡುತ್ತದೆ ಎಂದರು.

ಶರಣರು ವಿದ್ವಾಂಸರಿಗೆ ಸೀಮಿತವಾಗಿದ್ದ ಹಳೆಗನ್ನಡ ಮತ್ತು ಸಂಸ್ಕೃತದಂತಹ ಭಾಷೆಗಳನ್ನು ಬಿಟ್ಟು ಕನ್ನಡದಲ್ಲಿ ವಚನ ಸಾಹಿತ್ಯವನ್ನು ಬರೆದರು. ಒಡನೆ ನುಡಿಯುವ ಮಹಾಮನೆ ಮತ್ತು ಅನುಭವ ಮಂಟಪಗಳ ಮೂಲಕ ಸರ್ವರ ಹಿತ ಕಾಯುವ ಬಸವಧರ್ಮದ ನಿರ್ಮಾತೃ ಗಳಾದರು.

ಕಾಯಕವೇ ಪ್ರಧಾನ ಕೈಲಾಸ ಎಂದವರು ಶರಣರು, ಕಾಯಕವು ಉತ್ಪನ್ನ ಮೂಲವಾದ ಸುಖಿ ದ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎನ್ನುವ ಅರಿವು ಶರಣರಿಗೆ ಇತ್ತು, ಅವರು ಅರ್ಥಶಾಸ್ತ್ರದ ಪ್ರವೀಣರು, ದೂರದೃಷ್ಟಿಯ ಸಮಾಜಶಾಸ್ತ್ರಜ್ಞರು ಆಗಿದ್ದರು ಎಂದು ಈಶ್ವರಪ್ಪನವರು ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಕಾಯಕ ಮಹತ್ವವನ್ನು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version