ದಿನದ ಸುದ್ದಿ

ಮಾಯಕೊಂಡ : ಬಿಜೆಪಿ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಗೆ ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡುವ ಭರವಸೆ ನೀಡಿದ ಹೊಸಳ್ಳಿ‌ ಗ್ರಾಮಸ್ಥರು

Published

on

ಸುದ್ದಿದಿನ,ದಾವಣಗೆರೆ: ನಿಮ್ಮ ಜೊತೆಯಲ್ಲೇ ನಾವಿದ್ದು ಮುಂಬರುವ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸಿ ಬಹುಮತದಿಂದ ನಿಮ್ಮ ಗೆಲುವಿಗೆ ಶಕ್ತಿಯಾಗಿ ನಿಲ್ಲುತ್ತೇವೆ ಎಂಬುದಾಗಿ ಹೊಸಳ್ಳಿ ಗ್ರಾಮಸ್ಥರು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಅವರಿಗೆ ಅಭಯ ನೀಡಿದ್ದಾರೆ.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಸವಾಪಟ್ಟಣದ ಹೊಸಳ್ಳಿಯ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಶ್ಯಾಮ್ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರೊಂದಿಗೆ ಆತ್ಮೀಯವಾಗಿ ಮಾತನಾಡಿದರು.

ಈ ವೇಳೆ ಗ್ರಾಮಸ್ಥರು ಶ್ಯಾಮ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡುವ ಭರವಸೆ ನೀಡಿದರು.

ಈ ವೇಳೆ ಗ್ರಾಮಸ್ಥರ ಉದ್ದೇಶಿಸಿ ಮಾತನಾಡಿದ ಶ್ಯಾಮ್, ತಾಯಿಯ ಆರ್ಶೀವಾದದ ಜೊತೆಗೆ ಗ್ರಾಮಸ್ಥರ ಬೆಂಬಲದ ಜನಾರ್ಶೀವಾದವೂ ಬೇಕು. ನಿರುದ್ಯೋಗಿ ಯುವಕರು ಸಾಕಷ್ಟಿದ್ದು, ಅವರ ಬದುಕು ಮತ್ತು ಕುಟುಂಬ ಉಜ್ವಲಗೊಳಿಸುವ ದೃಷ್ಟಿಯಿಂದ ಉದ್ಯೋಗ ಕಟ್ಟಿಕೊಡಲು ಸಹಕರಿಸ ಲಾಗುವುದು ಎಂದು ಮನದಾಳದ ಮಾತು ತಿಳಿಸಿದರು.

ಕ್ಷೇತ್ರದ ಶ್ರಮ ಜೀವಿಗಳು, ಬಡವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಸದಾಶಯ ನನಗಿದೆ. ಇದಕ್ಕೆ ನಿಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿ ನನಗೆ ಬೆಂಬಲಿಸಿ ಆರ್ಶೀವದಿಸುವ ಮುಖೇನ ಗೆಲುವು ಕೊಟ್ಟು ಕ್ಷೇತ್ರದ ಏಳಿಗೆಗೆ ಸದಾವಕಾಶವನ್ನು ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಯುವಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version