ದಿನದ ಸುದ್ದಿ
ಮಾಯಕೊಂಡ | ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಗೆಲುವು ; ಕಣದಲ್ಲಿದ್ಧ ಇತರೆ ಅಭ್ಯರ್ಥಿಗಳೆಷ್ಟು..? ಅವರು ಪಡೆದ ಮತಗಳೆಷ್ಟು ಗೊತ್ತಾ..?
ಸುದ್ದಿದಿನ, ದಾವಣಗೆರೆ : ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತಾರೂಢ ಬಿಜೆಪಿ ಸೋಲು ಅನುಭವಿಸಿದೆ. ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ.
ಬಿಜೆಪಿ 65 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜೆಡಿಎಸ್ 19, ಇತರರು ನಾಲ್ಕು ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಈಗಾಗಲೇ ಸಮಾಲೋಚನಾ ಕಾರ್ಯ ಮುಂದುವರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದಾವಣಗೆರೆ ಜಿಲ್ಲೆಯ ದಾವಣಗೆರೆ ಉತ್ತರ, ದಾವಣಗೆರೆ-ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹರಿಹರ, ಜಗಳೂರು, ಹೊನ್ನಾಳಿ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ಹರಿಹರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಮಾಯಕೊಂಡ ಕ್ಷೇತ್ರದ ವಿವರ
ಮಾಯಕೊಂಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಅವರು 70916 ಮತಗಳನ್ನು ಪಡೆಯುವುದರ ಮೂಲಕ ಜಯಭೇರಿ ಭಾರಿಸಿದ್ದಾರೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಆನಂದಪ್ಪ ಹೆಚ್. ಅವರು 12915 ಮತಗಳು, ಬಿಜೆಪಿ ಅಭ್ಯರ್ಥಿ ಎಂ. ಬಸವರಾಜ ನಾಯ್ಕ್ 34630, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಫ್ರೊ. ಧರ್ಮನಾಯ್ಕ್ 512, ಆರ್.ಪಿ.ಐ ನ ಅಜ್ಜಪ್ಪ 445, ಪ್ರಜಾಕೀಯ ಪಕ್ಷದ ಚೇತನ್ ಕುಮಾರ್ ಮಾಯ್ಕ್ 1226, ಕೆಆರ್ ಪಿ ಪಕ್ಷದ ಶಾಂತಾ ಬಾಯಿ 223, ಕೆಆರ್ ಎಸ್ ಪಕ್ಷದ ಸೋಮಶೇಖರ. ಬಿ 210, ಪಕ್ಷೇತರ ಅಭ್ಯರ್ಥಿಳಾದ ಎ.ಕೆ. ಗಣೇಶ್ 610, ಬಿ.ಎಂ.ಪುಷ್ಪ ವಾಗೀಶ ಸ್ವಾಮಿ 37614, ಮಂಜು ಮಾದಿಗ 192,ಪಿ.ಡಿ ಲೋಕೇಶ 586, ಪಿ.ಆರ್.ಶ್ರೀನಿವಾಸ 438, ಸವಿತಾಬಾಯಿ ಮಲ್ಲೇಶ್ ನಾಯ್ಕ್ 544, ಹಾಗೂ ನೋಟ ( NOTA) ಕ್ಕೆ 718 ಮತಗಳು ಲಭಿಸಿದ್ದು, ಒಟ್ಟು 1,61,790 ಜನರು ಮತಚಲಾಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243