ದಿನದ ಸುದ್ದಿ
ಮಾಯಾವತಿಯವರೇ ಮುಂದಿನ ಪ್ರಧಾನಿ : ಶಾಸಕ ಎನ್. ಮಹೇಶ್
ಸುದ್ದಿದಿನ, ಚಾಮರಾಜನಗರ: ಮುಂದಿನ ದಿನಗಳಲ್ಲಿ ನಡೆಯಲಿರುವ ಲೋಕ ಸಮರದಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ಈ ದೇಶದ ಪ್ರಧಾನ ಮಂತ್ರಿಯಾಗುತ್ತಾರೆ ಅಂತ ಚಾಮರಾಜನಗರದಲ್ಲಿ ಮಾಜಿ ಸಚಿವ ಹಾಗೂ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಭವಿಷ್ಯ ನುಡಿದರು.
ಚಾಮರಾಜನಗರದ ತಾಲ್ಲೂಕು ಕಛೇರಿ ಪಕ್ಕದಲ್ಲಿ ಭಾನುವಾರ ನಡೆದ ಬಹುಜನ ಸಮಾಜ ಪಕ್ಷದ ಕಾನ್ಸಿರಾಂರವರ ಜನ್ಮ ದಿನಾಚರಣೆ ಮತ್ತು ಬಹುಜನ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್. ಮಹೇಶ್ ಈ ಭಾರಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕಿಂತ ಹೆಚ್ಚು ಸಂಸದರನ್ನು ಬಹುಜನ ಸಮಾಜ ಪಕ್ಷ ಪಡೆಯಲಿದ್ದು, ಆ ಮೂಲಕ ಮಾಯಾವತಿಯವರು ದೇಶದ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೇಸ್ ಪಕ್ಷ 60 ಸಂಸದರನ್ನು ಹೊಂದಲು ಶಕ್ತಿಯಾಗಿದೆ, ಆದರೆ ಮಾಯಾವತಿಯವರ ನೇತೃತ್ವದ ಬಹುಜನ ಸಮಾಜ ಪಕ್ಷದಿಂದ 65 ಸಂಸದರು ಲೋಕಸಭೆಗೆ ಚುನಾಯಿತರಾಗುವ ಮೂಲಕ ಭಾರಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಎನ್. ಮಹೇಶ್ ಹೇಳಿದರು.
ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು 2014 ರಲ್ಲಿ ದೇಶದ ಪ್ರಧಾನ ಮಂತ್ರಿಯಾದ ಬಳಿಕ ಬಿಜೆಪಿಯಲ್ಲಿ ಇದದ್ದ್ಯಾಯ ನಾಯಕತ್ವ ಇಲ್ಲದಂತಾಗಿದೆ, ನರೇಂದ್ರ ಮೋದಿಯವರಿಗೆ ಪ್ರಧಾನ ಮಂತ್ರಿ ಹುದ್ದೆಗೆ ಸ್ಪರ್ದೆ ನೀಡುವ ವ್ಯಕ್ತಿ ಎಂದರೆ ಬೆಹಂಜೀ ಮಾಯಾವತಿಯವರೇ ಎಂದು ಹೇಳಿದ ಮಹೇಶ್, ಪ್ರಜಾಪ್ರಭುತ್ವ ಉಳಿಸೋದು ಭೀಮನ ಮಕ್ಕಳಿಂದ ಮಾತ್ರ ಸಾಧ್ಯ. ಪವಾಡ ಪುರುಷರಾದ ಮಂಟೇಸ್ವಾಮಿ ಸಿದ್ದಾಪ್ಪಾಜಿ ಮುಂದೆ ಆಣೆ ಮಾಡಿಹೇಳ್ತೀವಿ ಪ್ರಜಾಪ್ರಭುತ್ವ ಉಳಿಸ್ತೀವಿ ಎಂದು ಹೇಳಿ, ಪ್ರಧಾನ ಮಂತ್ರಿ ನರೇಂದ್ರಮೋದಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೇಂದ್ರದ ಸಚಿವ ಅನಂತಕುಮಾರ್ ಹೆಗಡೆಯಿಂದ ಪ್ರಜಾ ಪ್ರಭುತ್ವ ಉಳಿಸೋಕೆ ಆಗಲ್ಲ, ಅದು ಬಿಎಸ್ಪಿ ಮಾತ್ರ ಸಾಧ್ಯ ಎಂದರು.
ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೆಚ್ಚವನ್ನು70 ಲಕ್ಷರೂಪಾಯಿಗೆ ನಿಗಧಿ ಪಡಿಸಿದೆ, ಆದ್ರೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ 37 ಲಕ್ಷರೂಪಾಯಿ ಸಾಕು, ಕಡಿಮೆ ಹಣದಲ್ಲಿ ಜಯಗಳಿಸೋದು ಹೇಗೆ ಎಂಬುದು ಬಿಎಸ್‍ಪಿ ಪಕ್ಷದವರಿಗೆ ಗೊತ್ತಿದೆ ಎಂದರು.
ಬಿಜೆಪಿ ಹುಟಿದ್ದು ಕಾಂಗ್ರೇಸ್‍ನಿಂದ, ಆದರೆ ಬಿಜೆಪಿಯವರು ಮತ್ತು ಕಾಂಗ್ರೇಸ್‍ನಿಂದ ಮತದಾರರ ನಿರೀಕ್ಷೆ ಮಾಡಿದಷ್ಟು ಪ್ರಮಾಣದಲ್ಲಿ ಜನಾಭಿವೃದ್ದಿಯಾಗಿಲ್ಲ ಎಂದು ಆರೋಪಿಸಿದ ಮಹೇಶ್, ಚುನಾವಣೆ ವೇಳೆ ಪಕ್ಷದ ಬಗ್ಗೆ ಅಪಪ್ರಚಾರ ಮಾಡ್ತಾರೆ , ಬಿಎಸ್‍ಪಿಯವರು ಕಾಂಗ್ರೇಸ್‍ನವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅಂತ ಅದನ್ನು ನಂಬ ಬೇಡಿ, ನಾವು ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ದೆ ಮಾಡುತ್ತೇವೆ ಎಂದರು.
ರಾಜ್ಯ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಹರಿರಾಮ್‍ಪ್ರಸಾದ್ ಮಾತನಾಡಿ, ಕಾಂಗ್ರೇಸ್ ದೊಡ್ಡಪ್ಪ , ಬಿಜೆಪಿ ಚಿಕ್ಕಪ್ಪ ಮಕ್ಕಳಿದಂತೆ ಎಂದು ಲೇವಡಿ ಮಾಡಿ, ಅನ್ಯಾಯ ಮಾಡುವವರು ಚುನಾವಣೆಯ ವೇಳೆ ಬಿ.ಎಸ್.ಪಿ ಮಹೇಶ್ ದೃವನಾರಾಯಣ್‍ನೊಂದಿಗೆ ಕೈ ಜೋಡಿಸಿದ್ದಾರೆ ಅಂತ ಹೇಳುತ್ತಿದ್ದಾರೆ ಅಂತಹವರ ಬಾಯಿ ಸೇದು ಹೋಗಲಿ ಎಂದು ಶಾಪ ಹಾಕಿದರು.
ಚಾಮರಾಜನಗರದಲ್ಲಿ ನಡೆದ ಬಿ.ಎಸ್.ಪಿ ಸಮಾವೇಶದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಎನ್. ಮಹೇಶ್ ಚುನಾವಣೆಯಲ್ಲಿ ಫಿನಿಕ್ಸ್‍ನಲ್ಲಿ ಬಿ.ಎಸ್.ಪಿ ಎದ್ದು ಬರಲಿದೆ, ಅಧಿಕೃತ ಅಭ್ಯರ್ಥಿಯನ್ನು ನಾಳೆ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯಾದರ್ಶಿ ಮಾದೇಶ , ಅರಕಲವಾಡಿ ನಾಗೇಂದ್ರ, ಅಮೃತಾ ಅಥ್ರಾಡಿ , ಆಲೂರು ಮಲ್ಲು, ಸೋಮಣ್ಣ ಉಪ್ಪಾರ್ ,ಉಪ್ಪಾರ್ ಸೋಸಲೆ ಸಿದ್ದರಾಜು, ತಾ.ಪಂ.ಸದಸ್ಯ ನಾಗರಾಜು, ನಗರಸಭಾ ಸದಸ್ಯ ಪ್ರಕಾಶ ,ಜಯಮೇರಿ , ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401