ಸಿನಿ ಸುದ್ದಿ
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ
ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ನಟಿ ಮಯೂರಿ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮದ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ, ಪಕ್ಕಾ ಮಾಡರ್ನ್ ಸ್ಟೈಲ್‌ನಲ್ಲಿ ಹಾಟ್ ಲುಕ್ ನಲ್ಲಿ ಮಯೂರಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು. ಕಳೆದ ಜೂ.12ರಂದು ಬೆಂಗಳೂರಿನ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ ಹಾಗೂ ಅರುಣ್ ಮದುವೆ ಆಗಿದ್ದರು. ಇನ್ನು, ಮಯೂರಿ ಮತ್ತು ಅರುಣ್ ದಂಪತಿಗೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ.
Just posted a photo https://t.co/AuldZbjmWV
— mayuri (@mayuri_kyatari4) March 16, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243