ದಿನದ ಸುದ್ದಿ

ಸಿಎಂ ಪರಿಹಾರ ನಿಧಿಗೆ 1‌ಕೋಟಿ ರೂ ದೇಣಿಗೆ ನೀಡಿದ ಎಂಸಿ&ಎ

Published

on

ಸುದ್ದಿದಿನ, ಬೆಂಗಳೂರು:- ಸರ್ಕಾರದ ಜಾಹೀರಾತು ಸಂಸ್ಥೆಯಾದ ಮೇ, ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿ ಟೆಡ್ (ಎಂಸಿಎ) ಕಂಪನಿಯು 2019-20 ನೇ ಸಾಲಿನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಫೆ.18 ಗುರುವಾರ 1 ಕೋಟಿ ರೂಪಾಯಿಗಳ ದೇಣಿಗೆ ನೀಡಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ ಶೆಟ್ಟರ್‌ರವ ರಿಗೆ ಮೆ. ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಂತು ಅಧ್ಯಕ್ಷರಾದ ಸಿ.ಮುನಿಕೃಷ್ಣರವರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ಚೆಕ್ ನೀಡಿದರು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವಗುಪ್ತ, ಕಂಪನಿಂರು ನಿರ್ದೇಶಕರಾದ ಹೆಚ್.ಆರ್. ತೀರ್ಥಲಿಂಗಪ್ಪ ಹಾಗೂ ವೀರೇಶ್ ಸಂಗಳದ ರವರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ ಬಿ. ಪೂಜಾರಿಯವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕೊವಿರ್-19ರ ಸೋಂಕಿನಿಂದ ಕಳೆದ ಸಾಲಿನಲ್ಲಿ ಎಲ್ಲಾ ವ್ಯವಹಾರಗಳೂ ತಟಸ್ಥವಾಗಿದ್ದ ಪರಿಸ್ಥಿತಿ ಎಲ್ಲರಿಗೂ ತಿಳಿದಿರುವುದೇ ಆದರೂ ಕಂಪನಿಯು ತನ್ನ ಪರಿಶ್ರಮ ಮತ್ತು ಸಮರ್ಪಿತ ಸೇವೆಯಿಂದ ಲಾಭ ಗಳಿಕೆಯ ಪಥದಲ್ಲಿ ಮುನ್ನಡೆಯುತ್ತಿದೆ ಹಾಗೂ ಇದು ಕಂಪನಿಂರು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಂರ ಬಗ್ಗೆ ಹೊಂದಿರುವ ಕಾಳಜಿಯ ದ್ಯೋತಕ ಇದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version