ದಿನದ ಸುದ್ದಿ
#MeToo | ಅರ್ಜುನ್ ಸರ್ಜಾ ಆಪ್ತ ಸಂಬರಗಿ ವಿರುದ್ದ ಶೃತಿ ಹರಿಹರನ್ ಕೊಲೆ ಬೆದರಿಕೆ ಆರೋಪ
ಸುದ್ದಿದಿನ, ಬೆಂಗಳೂರು : ಮೀಟೂ ಆಂದೋಲನಕ್ಕೆ ಭಾರೀ ಟ್ವಿಸ್ಟ್ ದೊರೆತಿದೆ, ನಟಿ ಶೃತಿ ಹರಿಹರನ್ ಗೆ ಕೊಲೆ ಬೆದರಿಕೆ ಒಡ್ಡಲಾಗಿದೆಯಂತೆ, ಫಿಲ್ಮ್ ಚೇಂಬರ್ ಹೊರಗಡೆ ಕೊಲೆ ಬೆದರಿಕೆ ಮಾಡಿದ್ದಾತೆ ಅಂತ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ನಿಂಬರಗಿ ನಟಿ ಶೃತಿ ಹರಿಹರನ್ ನಿಂದ ಗಂಭೀರ ಆರೋಪ ಮಾಡಿದ್ದಾರೆ ಶೃತಿಹರಿಹರನ್.
ಮಧ್ಯರಾತ್ರಿ 12.15 ಕ್ಕೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿದ ನಟಿ ಶೃತಿ ಹರಿಹರನ್ ಅವರು ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದರು. ತಮಿಳು ಚಿತ್ರೀಕರಣ ಸಂಬಂಧ ಇಂದು ಮುಂಜಾನೆ 6 ಗಂಟೆಯ ವಿಮಾನದಲ್ಲಿ ಚೆನ್ನೈ ತೆರಳಿದರು ನಟಿ ಶೃತಿ ಹರಿಹರನ್.
ಚೆನ್ನೈ ತೆರಳಬೇಕಿರೋ ಕಾರಣದಿಂದ ಮಧ್ಯರಾತ್ರಿಯೇ ಠಾಣೆಗೆ ದೌಡಾಯಿಸಿದ ಶೃತಿ ಹರಿಹರನ್ ಪ್ರಶಾಂತ್ ನಿಂಬರಗಿ ವಿರುದ್ದ ದೂರು ದಾಖಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401