ದಿನದ ಸುದ್ದಿ

ತೇಜಸ್ ಕಾರ್ಯಕ್ರಮದ ಮೂಲಕ 30 ಸಾವಿರ ಕುಶಲ ಕರ್ಮಿಗಳನ್ನು ಸಂಯುಕ್ತ ಅರಬ್ ರಾಷ್ಟ್ರಗಳಿಗೆ ಕಳುಹಿಸಲು ಕ್ರಮ : ಸಚಿವ ಅನುರಾಗ್ ಸಿಂಗ್ ಠಾಕೂರ್

Published

on

ಸುದ್ದಿದಿನ, ದೆಹಲಿ : ಸಂಯುಕ್ತ ಅರಬ್ ಗಣರಾಜ್ಯದೊಂದಿಗೆ ಮಾನವ ಸಂಪನ್ಮೂಲ ವಿನಿಮಯಕ್ಕಾಗಿ ಮುಂಬರುವ ದಿನಗಳಲ್ಲಿ ತೇಜಸ್ ಕಾರ್ಯಕ್ರಮದ ಮೂಲಕ 30 ಸಾವಿರ ಕುಶಲ ಕರ್ಮಿಗಳನ್ನು ಸಂಯುಕ್ತ ಅರಬ್ ರಾಷ್ಟ್ರಗಳಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಹುನರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಒಟಿಟಿ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಇದರಿಂದ ವಿದೇಶಿ ಮಾರುಕಟ್ಟೆ ಬೆಳವಣಿಗೆಯಾಗಲಿದೆ ಎಂದರು.

ವಲಸೆ ಪ್ರಮಾಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಮತ್ತು ಮೌಲ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version