ದಿನದ ಸುದ್ದಿ

‘ಪ್ಯಾಟೆ ಹುಡುಗಿ ಹಳ್ಳಿ ಲೈಫು’ ಮೆಬಿನ ಮೈಕಲ್ ದುರಂತ ಅಂತ್ಯ : ಕಂಬನಿ ಮಿಡಿದ ಅಭಿಮಾನಿಗಳು

Published

on

ಸುದ್ದಿದಿನ,ಮಂಡ್ಯ: ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ‘ಪ್ಯಾಟೆ ಹುಡುಗಿ ಹಳ್ಳಿ ಲೈಫು’ ರಿಯಾಲಿಟಿ ಖ್ಯಾತಿಯ ಮೆಬಿನ‌ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಮಂಗಳವಾರ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಅತೀವ ದುಃಖದಿಂದ ಕಂಬನಿ ಮಿಡಿದರು.

ಬೆಂಗಳೂರಿನಿಂದ ಸೋಮವಾರಪೇಟೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಮೆಬೀನಾ ಅವರು ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಎದುರುಗಡೆಯಿಂದ ಬಂದ ಟ್ರಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮೆಬೀನಾ ಅವರನ್ನು ಮೊದಲು ಆದಿಚುಂಚನಗಿರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗ ಮದ್ಯೆಯೇ ಮೃತಪಟ್ಟಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4 ವಿನ್ನರ್ ಮೆಬಿನ ಮೈಕಲ್ ಅವರ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346253

Trending

Exit mobile version