ದಿನದ ಸುದ್ದಿ
ಪರಿಶಿಷ್ಟ ಜಾತಿ ಅಭ್ಯರ್ಥಿ | ಮಾಧ್ಯಮ ಪ್ರವೇಶಿಕೆ : ಬರಹ ಮತ್ತು ಸಂವಹನ ಕೌಶಲ- ರಾಜ್ಯ ಮಟ್ಟದ ಕಮ್ಮಟ
ಸುದ್ದಿದಿನ,ದಾವಣಗೆರೆ : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2021 ರ ಜೂನ್ ತಿಂಗಳಿನಲ್ಲಿ ವಿಶೇಷ ಘಟಕ ಯೋಜನೆಯಡಿ “ಮಾಧ್ಯಮ ಪ್ರವೇಶಿಕೆ : ಬರಹ ಮತ್ತು ಸಂವಹನ ಕೌಶಲ” ವಿಷಯ ಕುರಿತ ಐದು ದಿನಗಳ ರಾಜ್ಯಮಟ್ಟದ ಕಮ್ಮಟವನ್ನು ನಡೆಸಲು ಉದ್ದೇಶಿಸಿದ್ದು, ಅರ್ಜಿ ಆಹ್ವಾನಿಸಿದೆ.
ಆಸಕ್ತಿಯಿರುವ 20 ರಿಂದ 25 ವರ್ಷ ವಯಸ್ಸುವುಳ್ಳ ರಾಜ್ಯದ ಎಲ್ಲಾ ಭಾಗದ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏ.30 ಕೊನೆಯ ದಿನವಾಗಿರುತ್ತದೆ.
ಇದನ್ನೂ ಓದಿ | ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ : ಸಿದ್ದರಾಮಯ್ಯ ಆಕ್ರೋಶ
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://karnatakasahityaacademy.org
ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ರಿಜಿಸ್ಟ್ರಾರ್ ಕರಿಯಪ್ಪ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243