ರಾಜಕೀಯ
ವಿಧಾನಸಭೆ ಕಲಾಪದಲ್ಲಿ ಮಾತಿನ ಚಕಮಕಿ |ಬಿಜೆಪಿಯ ರಾಮದಾಸ್ ರಿಂದ ಧರಣಿ
ಸುದ್ದಿದಿನ, ಬೆಂಗಳೂರು | ಇಂದಿನ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ರಾಮದಾಸ್ ಅವರು ಕಿಕ್ ಬ್ಯಾಕ್ ಆರೋಪ ಕುರಿತು ಚರ್ಚೆ ಮಾಡಲ್ಲ ಆದರೆ ಇಂದಿರಾ ಕ್ಯಾಂಟೀನ್ ಅವ್ಯವಹಾರ ಕುರಿತ ಚರ್ಚೆಗೆ ಪಟ್ಟು ಹಿಡಿದರು. ನನ್ನ ಚರ್ಚೆ ಅಪೂರ್ಣವಾಗಿದೆ ಚರ್ಚೆ ಮುಂದುವರೆಸಲು ಅವಕಾಶ ಕೊಡಿ. ನನ್ನ ಬಳಿ ಭ್ರಷ್ಟಾಚಾರ ಕುರಿತು ಎಲ್ಲ ದಾಖಲೆ ಇದೆ ದಾಖಲೆ ಇಟ್ಟು ಚರ್ಚೆ ಮುಂದುವರೆಸುತ್ತೇನೆ ನನ್ನ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸಬೇಡಿ ಕಿಕ್ ಬ್ಯಾಕ್ ಯಾರು ಪಡೆದರು ಅನ್ನುವ ಬಗ್ಗೆಯೂ ದಾಖಲೆ ಇದೆ ಎಂದು ಸದನದಲ್ಲಿ ರಾಮದಾಸ್ ಪಟ್ಟುಹಿಡಿದರು.
ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಸೂಚನೆಗಳನ್ನು ತಳ್ಳಿ ಹಾಕಿದ ರಾಮದಾಸ್ ಅವರಿಗೆ ನಿಮ್ಮ ಚರ್ಚೆ ಬೇಡ ಎಂದು ಪದೇ ಪದೇ ಸೂಚನೆ ನೀಡಿದರು. ಸದನದ ಸಮಯವನ್ನು ವ್ಯರ್ಥ ಮಾಡಬೇಡಿ ಸುಗಮ ಕಲಾಪಕ್ಕೆ ಅಡ್ಡಿ ಪಡಿಸಬೇಡಿ, ದಾಖಲೆ ಕೊಟ್ಟರೆ ಮರುಪರಿಶೀಲಿಸುವುದಾಗಿ ಸ್ಪೀಕರ್ ಹೇಳಿದರು.
ಹಾಗಾಗಿ ಕಲಾಪ ಸಲಹಾ ಸಮಿತಿಗೆ ದಾಖಲೆ ಸಲ್ಲಿಸಿ, ಈಗ ಚರ್ಚೆ ಮುಕ್ತಾಯ, ದಯವಿಟ್ಟು ಸುಮ್ಮನೆ ಕೂರಿ ಎಂದ ಕೃಷ್ಣಾರೆಡ್ಡಿ ಮನವಿಗೆ ಬಗ್ಗದ ರಾಮದಾಸ್ ಚರ್ಚೆಗೆ ಹಟ ಹಿಡಿದರು. ಬಿಜೆಪಿ ನಾಯಕರು ಅವರಿಗೆ ಸಾಥ್ ನೀಡಿದರು. ನಂತರ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆ ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ದಾರೆ ಬಿಜೆಪಿ ಸದಸ್ಯ ರಾಮದಾಸ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401