ದಿನದ ಸುದ್ದಿ
ಅಪ್ಪಂದಿರ ದಿನಕ್ಕೆ ಗಿಫ್ಟ್ ಕೊಟ್ಟ ‘ಶಾನುಭೋಗರ ಮಗಳು’
ಸುದ್ದಿದಿನ ಡೆಸ್ಕ್: ಜಗತ್ತೇ ಫಾದರ್ಸ್ ಡೇ ಸಂಭ್ರಮದಲ್ಲಿರುವಾಗ ಇಲ್ಲೊಬ್ಬಳು ಪೈಲಟ್ ತನ್ನಪ್ಪನಿಗೆ ಒಂದು ಒಳ್ಳೆಯ ಗಿಫ್ಟ್ ಕೊಟ್ಟಿದ್ದಾಳೆ. ಅಂದಹಾಗೆ ಈ ಶಾಉಭಾಗರ ಮಗಳ ಹೆಸರು ಮೇಘನಾ.
ಹೈದರಾಬಾದ್‍ನ ದಿಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ಯುದ್ಧ ವಿಮಾನ ಪೈಲಟ್ ತರಬೇತಿಯನ್ನು ಪೂರೈಸಿರುವ ಚಿಕ್ಕಮಗಳೂರಿನ ಮೇಘನಾ ತನ್ನಪ್ಪನಿಗೆ ಒಳ್ಳೆ ಗಿಫ್ಟ್ ಕೊಟ್ಟಿದ್ದಾರೆ.
ದಿಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಮೇಘನಾ ಅವರು ಯುದ್ಧ ವಿಮಾನ ಪೈಲಟ್ ಆಗಿ ಆಯ್ಕೆಯಾಗಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಯಿತು. ಈ ಮೂಲಕ ಈ ಸಾಧನೆ ಮಾಡಿರುವ ದಕ್ಷಣ ಭಾರತದ ಮೊದಲ ಯುವತಿ ಎಂಬ ಕೀರ್ತಿಗೆ ಮೇಘನಾ ಅವರು ಪಾತ್ರರಾಗಿದ್ದಾರೆ.
ಮೇಘನಾ ಅವರ ತಂದೆ ಎಂಕೆ ಸುರೇಶ್ ಅವರು ವಕೀಲರು, ತಾಯಿ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆ.
ಮನಾಲಿ ಪರ್ವತಾರೋಹಣ, ಗೋವಾದಲ್ಲಿ ಪ್ಯಾರಾ ಗ್ಲೈಡಿಂಗ್, ತರಬೇತಿ ಪಡೆದಿರುವ ಮೇಘನಾ, 2017ರಲ್ಲಿ ದುಂಡಿಗಲ್ ಏರ್‍ಫೋರ್ಸ್ ಅಕಾಡೆಮಿಗೆ ಪ್ರವೇಶ ಪಡೆದಿದ್ದರು.