ಸಿನಿ ಸುದ್ದಿ

#MeToo | ‘I stand with The Gentlemen’ ಅಭಿಯಾನ ಶುರು ಮಾಡಿದ್ರು ಚಿರಂಜೀವಿ ಸರ್ಜಾ..!

Published

on

ಸುದ್ದಿದಿನ ಡೆಸ್ಕ್ | ಶೃತಿ‌ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ ಬೆನ್ನಲ್ಲೇ, ಇದರ ಪರವಾಗಿ ಹಾಗೂ ವಿರೋಧವಾಗಿ ಚರ್ಚೆಗಳು ನಡೆಯುತ್ತಿವೆ. ನಿನ್ನೆಯಷ್ಟೆ ಫಿಲ್ಮ್ ಚೇಂಬರ್ ನಲ್ಲಿ ನಟ ಅಂಬರೀಷ್ ಅವರ ಮುಖ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯೂ ವಿಫಲವಾಗಿದೆ.

ಈ ಕಡೆ ಶೃತಿ ಕ್ಷಮೆ ಕೇಳುವ ಮಾತಿಲ್ಲ ಅಂದಿದ್ದಾರೆ. ಇನ್ನೊಂದು ಕಡೆ ಸರ್ಜಾ ನೋ ಕಾಂಪ್ರಮೈಸ್ ಎಂದು ಕಡ್ಡಿ ತುಂಡಾದ ಹಾಗೆ ಹೇಳಿದ್ದಾರೆ. ಮತ್ತೊಂದೆಡೆ ಇದಕ್ಕೆ ಎಡಪಂಥೀಯ, ಬಲಪಂಥೀಯ, ಹಿಂದುತ್ವದ ಬಣ್ಣ ವನ್ನು ಬಳಿಯಲಾಗುತ್ತಿದೆ.

ಸರ್ಜಾ ಅವರು ಇಪ್ಪತ್ತು ಕೋಟಿ ಗೆ ಮುಇರು ಮಾನನಷ್ಟ ಮೊಕದ್ದೆಮೆಯನ್ನು ಶೃತಿ ಮೇಲೆ ದಾಖಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಜಾ ಸೋದರ ಅಳಿಯ ಚಿರಂಜೀವಿ ಸರ್ಜಾ ಅವರು ಟ್ವಿಟರ್ ನಲ್ಲಿ ‘ I stand with The Gentlemen’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಸರ್ಜಾ ಅವರನ್ನು ಬೆಂಬಲಿಸುವವರು ಈ‌ ಅಭಿಯಾನದಡಿ ಒಪ್ಪಿಗೆಯನ್ನು ಸೂಚಿಸಿ ಸರ್ಜಾ ಅವರನ್ನು ಬೆಂಬಲಿಸ ಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version