ದಿನದ ಸುದ್ದಿ
ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ“
ಸುದ್ದಿದಿನ, ದಾವಣಗೆರೆ : ನಾಯಕ ಪಂಗಡದ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನದ ಅಂಗವಾಗಿ (ಮಾ.09-ರಂದು) ಮಂಗಳವಾರ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಮೇವು ಸಂಗ್ರಹಣೆ ಮಾಡಿ ಚಳ್ಳಕೆರೆ ತಾಲ್ಲೂಕು ಮಲ್ಲೂರಹಳ್ಳಿಯ ಶ್ರೀ ರಾಜಲು ದೇವರು ಮತ್ತು ದಾಸರಮುತ್ತೇನಹಳ್ಳಿ ಶ್ರೀ ಓಬಳ ದೇವರ ಎತ್ತುಗಳಿಗೆ ಕಳುಹಿಸಿಕೊಡಲಾಯಿತು.
ಮ್ಯಾಸ ಬೇಡ/ಮ್ಯಾಸ ನಾಯಕ ಬುಡಕಟ್ಟು ಜನಾಂಗವು ವಿಶಿಹೊಳಕೆರೆ,ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ಸಮೂದಾಯವಾಗಿದೆ. ಆನಾಧಿಕಾಲದಿಂದಲೂ ಸಂರಕ್ಷಣೆ ಮಾಡಿಕೊಂಡು ಬಂದಿರುವ ದೇವರ ಎತ್ತುಗಳು ಇಂದು ಮೇವು ನೀರು ಇಲ್ಲದೆ ಸತ್ತು ಹೊಗುತ್ತಿವೆ.
ದೇವರ ಎತ್ತಿನ ಕಿಲಾರಿ ಗಳು ದೇವರ ಎತ್ತುಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಾರೆ. ಮ್ಯಾಸ ಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ) ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ“ ನಮ್ಮ ಪೂರ್ವಜರ ಪ್ರತೀಕವಾಗಿರುವ ದೇವರ ಎತ್ತುಗಳನ್ನು ಉಳಿಸಿಕೊಳ್ಳೂಣʼʼಒಂದು ಹೊರೆ ಮೇವು ನೀಡಿʼ ಎಂದು ಮ್ಯಾಸ ನಾಯಕ ಬುಡಕಟ್ಟು ಜನರು ಮತ್ತು ಮುಖ್ಯವಾಹಿನಿಯ ಎಲ್ಲಾ ಸಾರ್ವಜನಿಕರಿಂದ ಮೇವು ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿರುತ್ತೇವೆ.
ಇದನ್ನೂ ಓದಿ | ಬ್ಯಾಂಕ್ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ 2 ದಿನದ ಬ್ಯಾಂಕ್ ಮುಷ್ಕರ
ಅಭಿಯಾನದ ಭಾಗವಾಗಿ ಇಂದು ಜಗಳೂರು ತಾಲ್ಲೂಕು ಸಿದ್ದಯ್ಯನಕೋಟೆ ಗ್ರಾಮದ ಮಂದಲರು ಬೆಡಗಿನ ಶ್ರೀಹನುಮಂತಪ್ಪ, ನಿವೃತ್ತ ಶಿಕ್ಷಕರು ಮತ್ತು ಹನುಮಂತಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಎರಡು ಲೋಡ್ ದೇವರ ಎತ್ತುಗಳಿಗೆ ಮೇವು ನೀಡಿ ಭಕ್ತಿಯನ್ನು ಸಮರ್ಪಿಸಿದರು.
ಮ್ಯಾಸ ಮಂಡಲದ ಸಮಸ್ತ ನೆಂಟರು ಬಂಟರು ಹಾಗೂ ಸರ್ವ ಸಾರ್ವಜನಿಕರು ಈ ಒಂದು ಮೇವು ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮದಲ್ಲಿ ಮೇವು ಸಂಗ್ರಹಿಸಿ ಮ್ಯಾಸ ಮಂಡಲದ ಎಲ್ಲಾ ಗುಡಿಕಟ್ಟೆಯ ದೇವರ ಎತ್ತುಗಳಿಗೆ ನೀಡಿ, ನಮ್ಮ ಬುಡಕಟ್ಟು ಸಂಸ್ಕೃತಿಯ ದೇವರ ಎತ್ತುಗಳ ಉಳಿವಿಗಾಗಿ ಈ ಒಂದು ಮೇವು ಸಂಗ್ರಹ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಬುಡಕಟ್ಟು ದೇವರ ಕೃಪೆಗೆ ಪಾತ್ರರಾಗಬೇಕು. ಮ್ಯಾಸ ಬೇಡ ಬುಡಕಟ್ಟು ಜನರ ಅಭಿವೃದ್ದಿಗಾಗಿ ಹಾಗೂ ಮ್ಯಾಸ ಬೇಡರ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಲು ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿಯಾದ ದೊಡ್ಡಮನಿ ಪ್ರಸಾದ್, ಬಿ.ಕರಿಯಪ್ಪ,ವಕೀಲರು, ಸಿದ್ದಯ್ಯನಕೋಟೆ ಗ್ರಾಮದ ಎಸ್ ಜೋತಿಲಿಂಗಪ್ಪ ಗ್ರಾ.ಪಂ.ಸದಸ್ಯರು, ದೇವರಾಜ ಪಾಳೇಗಾರ, ಹನುಮಂತಪ್ಪ ನಿವೃತ್ತ ಶಿಕ್ಷರು, ಮುದ್ದೇರ ಹನುಮಂತಪ್ಪ, ಹೊಳಕೆರೆ, ನಿಂಗಪ್ಪ, ಕುಣೆಮಾದಿಹಳ್ಳಿ,ಹನುಮಂತಪ್ಪ,ಉಜ್ಜಿನಪ್ಪ,ಹೊಳಕೆರೆ, ಬಸವರಾಜಪ್ಪ,ಅಂಜಿನಪ್ಪ, ಹೊಳಕೆರೆ, ಗೋಣೆಪ್ಪ, ಗಜೇಂದ್ರ,ಕೆ.ಸಿ.ರಮೇಶ, ದಾಸರ ಮುತ್ತೇನಹಳ್ಳಿ ಸಣ್ಣ ಓಬಯ್ಯ, ಗೊಂಚಿಗಾರ ದೊಡ್ಡಯ್ಯ,ಕಾಕಸೂರಯ್ಯ ಓಬಯ್ಯನಹಟ್ಟಿ,ಎಂ.ಕೆ.ಬೋಸಪ್ಪ,ಕೆ.ಬಿ.ಓಬಣ್ಣ, ಕೆ.ಮಧು ಮತ್ತು ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243