ದಿನದ ಸುದ್ದಿ

ಜಗಳೂರು | ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹಣೆ

Published

on

ಸುದ್ದಿದಿನ, ಜಗಳೂರು : ಮ್ಯಾಸ ಬೇಡ/ಮ್ಯಾಸ ನಾಯಕ ಬುಡಕಟ್ಟು ಜನಾಂಗವು ರಾಜ್ಯದಲ್ಲಿ ವಿಶಿಷ್ಟವಾದ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ಸಮೂದಾಯವಾಗಿದೆ. ಆನಾಧಿಕಾಲದಿಂದಲೂ ಸಂರಕ್ಷಣೆ ಮಾಡಿಕೊಂಡು ಬಂದಿರುವ ದೇವರ ಎತ್ತುಗಳು ಇಂದು ಮೇವು ನೀರು ಇಲ್ಲದೆ ಸತ್ತು ಹೊಗುತ್ತಿವೆ. ದೇವರ ಎತ್ತಿನ ಕಿಲಾರಿ ಗಳು ದೇವರ ಎತ್ತುಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಾರೆ.

ಈ ಜನಾಂಗಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದವರ ಅನುದಾನ ಸಾಕಷ್ಟು ದುರ್ಭಳಕೆಯಾಗುತ್ತಿದೆ. ಸುಮಾರು ವರ್ಷಗಳಿಂದ ದೇವರ ಎತ್ತುಗಳಿಗೆ ಮೇವು ನೀರಿನ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲು ಮನವಿ ಮಾಡಿದರು ಸಹ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಈಗಾಗಲೇ ಎಲ್ಲಾ ಗುಡಿಕಟ್ಟೆಗಳ ಸುಮಾರು ದೇವರ ಎತ್ತುಗಳು ಮೇವು ನೀರು ಇಲ್ಲದೆ ಸತ್ತು ಹೋಗಿವೆ.

ಈ ಬಗ್ಗೆ ಟಿವಿ ಮತ್ತು ಪತ್ರಿಕಾ ಮಾದ್ಯಮದಲ್ಲಿ ಸಕಾಷ್ಟು ಬಾರಿ ವರಿದಿಯಾಗಿದೆ. ಆದರೂ ಸಹ ಸರ್ಕಾರ ಮೇವು ನೀರಿನ ಸೌಲಭ್ಯವನ್ನು ಅನುಕೂಲ ಮಾಡದೆ ಬುಡಕಟ್ಟು ಜನರನ್ನು ಕಡೆಗಣಿಸಿದೆ. ಹಿಗಾದರೆ ಬುಡಕಟ್ಟು ಜನರು ಉಳಿಸಿಕೊಂಡು ಬಂದ ದೇವರ ಎತ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸಮಿತಿ ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ “ ʼಒಂದು ಹೊರೆ ಹುಲ್ಲು ನೀಡಿ, ನಮ್ಮ ಪೂರ್ವಜರ ಪ್ರತೀಕವಾಗಿರುವ ದೇವರ ಎತ್ತುಗಳನ್ನು ಉಳಿಸಿಕೊಳ್ಳೂಣʼ ಎಂದು ಮ್ಯಾಸ ನಾಯಕ ಬುಡಕಟ್ಟು ಜನರು ಮತ್ತು ಮುಖ್ಯವಾಹಿನಿಯ ಎಲ್ಲಾ ಸಾರ್ವಜನಿಕರಿಂದ ಮೇವು ಸಂಗ್ರಹ ಮಾಡಲಾಗುತ್ತದೆ.

ಇದರ ಭಾಗವಾಗಿ ಇಂದು ಜಗಳೂರು ತಾಲ್ಲೂಕು ಮಾದಮುತ್ತೇನಹಳ್ಳಿ ಗ್ರಾಮದ ಕಾಮಗೇತಿ ಬೆಡಗಿನ ಶ್ರೀಮತಿ ಜಯಮ್ಮ ಮತ್ತು ಶ್ರೀ ತಿಮ್ಮಲಾಪುರದ ಪಾಲಯ್ಯ ಇವರ ಮಕ್ಕಳು ಒಂದು ಲೋಡ್‌ ರಾಗಿ ಹುಲ್ಲನ್ನು ಖರಿದಿಸಿ ದೇವರ ಎತ್ತುಗಳಿಗೆ ನೀಡಿರುತ್ತಾರೆ.

ಮ್ಯಾಸ ಮಂಡಲದ ಸಮಸ್ತ ನೆಂಟರು ಬಂಟರು ಹಾಗೂ ಸರ್ವ ಸಾರ್ವಜನಿಕರು ಈ ಒಂದು ಮೇವು ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮದಲ್ಲಿ ಮೇವು ಸಂಗ್ರಹಿಸಿ ಮ್ಯಾಸ ಮಂಡಲದ ಎಲ್ಲಾ ಗುಡಿಕಟ್ಟೆಯ ದೇವರ ಎತ್ತುಗಳಿಗೆ ನೀಡಬೇಕೆಂದು ಕೋರಿಕೊಳ್ಳುತ್ತೇವೆ.

ಮೇವು ಸಂಗ್ರಹಿಸಿದವರು ನಮ್ಮ ಸಮಿತಿಗೆ ತಿಳಿಸಿದರೆ ಮೇವುನ್ನು ತೆಗೆದುಕೊಂಡು ಹೋಗಿ ದೇವರ ಎತ್ತುಗಳಿಗೆ ತಲುಪಿಸುತ್ತೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ. ಶ್ರೀಮತಿ ಜಯಮ್ಮ ಶ್ರೀ ಪಾಲಯ್ಯ ಕುಟುಂಬದವರು ಭಕ್ತಿ ಪೂರ್ವಕವಾಗಿ ಉರಿಮೆ ವಾಧ್ಯದೊಂದಿಗೆ ಪೂಜೆ ಸಲ್ಲಿಸಿ ದೇವರ ಎತ್ತುಗಳ ಉಳಿವಿಗಾಗಿ ಕೋರಿಕೊಂಡರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಮ್ಯಾಸ ಬೇಡ ಅಥವಾ ಮ್ಯಾಸ ನಾಯಕ ಬುಡಕಟ್ಟು ಜನರ ದೇವರ ಎತ್ತುಗಳ ಗೊಳು ಕೇಳಬೇಕೆಂದು ಮನವಿ ಮಾಡುತ್ತೇವೆ. ಮತ್ತು ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕೆಂದು ಒತ್ತಾಯಿಸುತ್ತೇವೆ.

ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯ ಕಾರ್ಯದರ್ಶಿಯಾದ ದೊಡ್ಡಮನಿ ಪ್ರಸಾದ್‌, ಉಪಾಧ್ಯಕ್ಷರಾದ ಎಂ ಕೆ ಬೋಸಪ್ಪ, ಕೆ.ಬಿ.ಓಬಣ್ಣ, ಕವಲಹಳ್ಳಿ ಕಾಮಣ್ಣ, ಕಿಲಾರಿ ಬಡಯ್ಯ, ದಿಬ್ದಹಳ್ಳಿ ರಮೇಶ, ಪೂಜಾರ್‌ ನಾಗರಾಜ ಮತ್ತು ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version