ದಿನದ ಸುದ್ದಿ

ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಸಾಲದು | ಕೇಂದ್ರದ ವಿರುಧ್ದ ಕಾಂಗ್ರೆಸ್ ಸಂಸದರ ಪ್ರತಿಭಟನೆ

Published

on

ಸುದ್ದಿದಿನ ಡೆಸ್ಕ್| ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಸಾಕಾಗುವುದಿಲ್ಲ ಎಂದು ಕಾಂಗ್ರೆಸ್ ಸಂಸದರು ಪಾರ್ಲಿಮೆಂಟ್ ಎದುರು ಪ್ರತಿಭಟನೆ ನಡೆಸಿದರು.

ಸಂಸತ್ತು ಭವನದ ಎದುರು ಪ್ರತಿಭಟನೆ ನಡೆಸಿದ ಸಂಸದರು, ಮೆಕ್ಕೆಜೋಳದ ಪಾಕೆಟ್ ಹಿಡಿದುಕೊಂಡು ಮುಖ್ಯ ದ್ವಾರ ಪ್ರವೇಶ ನಿರ್ಬಂಧಿಸಿದರು.

ಕೇಂದ್ರ ಸರ್ಕಾರ ಈಚೆಗೆ ಕನಿಷ್ಟ ಬೆಂಬಲ ಬೆಲೆ ಏರಿಕೆ ಮಾಡಿ ಆದೇಶ ನೀಡಿತ್ತು. ಕಾಂಗ್ರೆಸ್ ಈ ನಿರ್ಧಾರವನ್ನು “ಜುಮ್ಲಾ” ಎಂದು ಕರೆದಿದೆ. ಯಾವುದೇ ಪೂರ್ವ ನಿರ್ಧಾರ ತೆಗೆದುಕೊಳ್ಳದೇ ಇಂಧನ ಏರಿಕೆ ಮಾಡುತ್ತದೆ. ಆದರೆ, ರೈತರ ಬೆಳೆಗಳಿಗೆ ದರ ನಿಗದಿ ಮಾಡುವಾಗ ಚರ್ಚೆ ಮಾಡಿ ಘೋಷಿಸುತ್ತದೆ ಎಂದು ತಿಳಿಸಿದರು‌‌.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version