ದಿನದ ಸುದ್ದಿ
ಕೆ ಆರ್ ಎಸ್ ಬುಡ ಅಲ್ಲಾಡಿಸ್ತಿದೆ ಗಣಿಗಾರಿಕೆ
ಸುದ್ದಿದಿನ ಡೆಸ್ಕ್: ಪಾಂಡವಪುರ ತಾಲೂಕು ಚಿನಕುರಳಿ, ಬೇಬಿಬೆಟ್ಟದ ಕಾವಲು, ಹೊನಗಾನಹಳ್ಳಿ, ಬನ್ನಂಗಾಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಗೆ ‘ಕ್ಕೆಯಾಗಲಿದೆ ಎನ್ನುವ ಅಂಶವು ವರದಿಯಿಂದ ಬಹಿರಂಗವಾಗಿದೆ.
ಗಣಿಗಾರಿಕೆಯಿಂದಾಗಿ ಈ ಪ್ರದೇಶ ವ್ಯಾಪ್ತಿಯಲ್ಲಿನ ಮನೆಗಳು ಜಖಂಗೊಳ್ಳುವ ಸಾ‘್ಯತೆಯಿದೆ. ರಸ್ತೆಗಳು ಹಾಳಾಗಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಜತೆಗೆ, ಕೆಆರ್‌ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ, ಜಲ್ಲಿ ಕ್ರಷರ್‌ಗಳನ್ನು ನಡೆಸುವುದು, ಕಲ್ಲುಪುಡಿ, ಜಲ್ಲಿ/ಸೈಜುಗಲ್ಲು/ಬೋರ್ಡಸ್, ದಿಂಡುಗಲ್ಲುಗಳ ಸಾಗಣೆಯನ್ನು ನಿಬರ್ಂಸಿ ಹಾಗೂ ನಿಷೇಸಿ ಪಾಂಡವಪುರ ತಹಸೀಲ್ದಾರ್ 2017 ಸೆ.10ರಿಂದ ಡಿಸೆಂಬರ್ 10ರವರೆಗೆ ಗಣಿಗಾರಿಕೆ ನಡೆಸದಂತೆ ನಿಷಧಾಜ್ಞೆ ಜಾರಿಗೊಳಿಸಿದ್ದರು ಎಂಬ ಸಂಗತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗೆ ನೀಡಿರುವ ವರದಿಯಲ್ಲಿ ಶ್ರೀರಂಗಪಟ್ಟಣ ಡಿವೈಎಸ್‌ಪಿ ವಿಶ್ವನಾಥ್ ಉಲ್ಲೇಖಿಸಿದ್ದಾರೆ.
ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ‘ಕ್ಕೆಯಾಗುವ ಸಾ‘್ಯತೆಯಿದೆ ಎನ್ನುವ ಅಂಶ ಆಗಾಗ್ಗೆ ತೀವ್ರ ಚರ್ಚೆಗೆ ಒಳಗಾಗಾಗುತ್ತಿದ್ದರೂ, ಈ ಬಗ್ಗೆ ಯಾವೊಬ್ಬ ಅಕಾರಿಗಳು ಲಿಖಿತ ಅಭಿಪ್ರಾಯ ನೀಡಿರಲಿಲ್ಲಘಿ. ಅಲ್ಲದೆ,ನಿಷೇ‘ಾಜ್ಞೆ ಜಾರಿ ಸಂದ‘ರ್ದಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ‘ಕ್ಕೆಯಾಗಲಿದೆ ಎನ್ನುವ ಅಂಶ ಹೇಳಿರಲಿಲ್ಲಘಿ. ಆದರೆ, ಅಕ್ರಮ ಗಣಿಗಾರಿಕೆಗೆ ಸಂಬಂಸಿದಂತೆ ಆರ್‌ಟಿಐ ಕಾರ‌್ಯಕರ್ತ ಕೆ.ಆರ್.ರವೀಂದ್ರ ಸಲ್ಲಿಸಿದ್ದ ಅರ್ಜಿ ಮೇರೆಗೆ, ಎಸ್‌ಪಿಗೆ ನೀಡಿರುವ ವರದಿಯಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಹಾನಿಯಾಗುವ ಸಂಭವವಿದೆ ಎನ್ನುವ ಅಂಶ ಪರೋಕ್ಷವಾಗಿ ಪ್ರಸ್ತಾಪವಾಗಿದೆ.