ಸಿನಿ ಸುದ್ದಿ

ಕಾನ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿದ ಸಚಿವ ಅನುರಾಗ್ ಠಾಕೂರ್

Published

on

ಸುದ್ದಿದಿನ ಡೆಸ್ಕ್ : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಕಾನ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಪೆವಿಲಿಯನ್ ಅನ್ನು ಉದ್ಘಾಟಿಸಿದರು.

ಈ ವೇಳೆ ಅವರು 53 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್‌ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್ ಅವರು ದೃಶ್ಯ ಮತ್ತು ಶ್ರವಣ ಮಾಧ್ಯಮ ಸಹ ನಿರ್ಮಾಣ ಪ್ರೋತ್ಸಾಹ ಯೋಜನೆಯಡಿ ಭಾರತದಲ್ಲಿ ನಿರ್ಮಾಣ ಮತ್ತು ಚಿತ್ರೀಕರಣಗೊಂಡ ಚಿತ್ರಗಳಿಗೆ ಶೇಕಡ 30ರಷ್ಟು ಅಂದರೆ 260ಸಾವಿರ ಡಾಲರ್‌ವರೆಗೆ ವಿನಾಯತಿ ನೀಡಲಾಗುವುದು ಎಂದು ಪ್ರಕಟಿಸಿದರು.

ಅಲ್ಲದೆ ಭಾರತದಲ್ಲಿ ಚಿತ್ರೀಕರಣ ಮಾಡಲಾಗುವ ವಿದೇಶಿ ಚಿತ್ರಗಳಿಗೆ ಹೆಚ್ಚುವರಿಯಾಗಿ 65 ಸಾವಿರ ಡಾಲರ್ ಬೋನಸ್ ನೀಡಲಾಗುವುದು. ಅವರು ಶೇಕಡ 15ಕ್ಕೂ ಅಧಿಕ ಮಾನವ ಸಂಪನ್ಮೂಲವನ್ನು ಭಾರತದಿಂದಲೇ ಬಳಸಿಕೊಂಡಿರಬೇಕು ಎಂದು ಹೇಳಿದರು.

ಭಾರತವನ್ನು ಚಲನಚಿತ್ರ ನಿರ್ಮಾಣ ಹಾಗೂ ಶ್ರವಣ ಮತ್ತು ದೃಶ್ಯ ಮಾಧ್ಯಮದ ತಾಣವನ್ನಾಗಿ ರೂಪಿಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಚಲನಚಿತ್ರ ಪರಂಪರಾ ಯೋಜನೆ ಅಡಿ ಸರ್ಕಾರ ವಿಶ್ವದ ಅತಿದೊಡ್ಡ ಸಿನಿಮಾ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದರಡಿ ಎಲ್ಲಾ ಭಾಷೆಗಳ 2 ಸಾವಿರದ 200 ಅಧಿಕ ಚಲನಚಿತ್ರಗಳ ವೈಭವವನ್ನು ಮರು ಸ್ಥಾಪಿಸಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version