ರಾಜಕೀಯ
ಜೆ.ಡಿ.ಎಸ್ ನಿಂದ ಬಿ.ಜೆ.ಪಿಗೆ 30 ಸೀಟುಗಳು ಹೆಚ್ಚು ಬಂದಿವೆ : ಸಚಿವ ಎಚ್.ಡಿ.ರೇವಣ್ಣ ಟಾಂಗ್
ಸುದ್ದಿದಿನ, ಬೆಂಗಳೂರು : ಬಿಜೆಪಿ ಹೆಚ್ಚು ಸೀಟು ಗೆಲ್ಲೋಕೆ ಜೆಡಿಎಸ್ ಬೆಂಬಲವಿತ್ತಂತೆ. ಜೆಡಿಎಸ್ ಹೆಸರೇಳಿಕೊಂಡೇ ಬಿಜೆಪಿ 30 ಸೀಟು ಗೆದ್ದಿದ್ದಂತೆ.ಇಲ್ಲವಾಗಿದ್ರೆ ಬಿಜೆಪಿಗೆ 104 ಸ್ಥಾನ ಸಿಗ್ತಿರಲಿಲ್ವಂತೆ, ಹೀಗಂತ ವಿಧಾನಸೌಧದಲ್ಲಿ ಬಿಜೆಪಿ ನಾಯಕರಿಗೆ ಸಚಿವ ರೇವಣ್ಣ ಟಾಂಗ್ ಕೊಟ್ಟಿದ್ದಾರೆ.
ನಮ್ಮ 104 ಶಾಸಕರಿಗೂ ದೇವರ ಆಶೀರ್ವಾದವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದು, ದೇವರ ಆಶೀರ್ವಾದ ಇದ್ದಿದ್ರೆ ಅವರೇ ಅಧಿಕಾರ ಹಿಡಿಯಬೇಕಿತ್ತು ಅಲ್ವಾ. ಯಾಕೆ ಸರ್ಕಾರ ರಚನೆ ಮಾಡೋಕೆ ಆಗಲಿಲ್ಲ ? ಇವರು ಜೆಡಿಎಸ್ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿದ್ದಾರೆ. ಹಾಗಾಗಿ ನಮ್ಮಿಂದಲೇ 30 ಸೀಟುಗಳು ಬಿಜೆಪಿಗೆ ಹೆಚ್ಚಾಗಿ ಬಂದಿವೆ ಎಂದಯ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401