ದಿನದ ಸುದ್ದಿ

ಹಾಸನದಲ್ಲಿ ಕಣ್ಣೀರು ಹಾಕಿದ ಸಚಿವ ಎಚ್.ಡಿ.ರೇವಣ್ಣ!

Published

on

ಸುದ್ದಿದಿನ ಡೆಸ್ಕ್: ಹಾಸನ ನಗರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು‌ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ತಮಾಷೆ ಘಟನೆವೊಂದು ನಡೆದಿದೆ !

ಸಚಿವ ಎಚ್.ಡಿ.ರೇವಣ್ಣ ಅವರು‌ ವಿವಿಧ ವಿಷಯ ಪ್ರಸ್ತಾಪಿಸಲು ಹಾಸನದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಸಚಿವ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಹೌದು, ಸುದ್ದಿಗೋಷ್ಠಿಯ ಕೊನೆಯಲ್ಲಿ ಸಚಿವರಿಗೆ ಬೆಂಬಲಿಗರು ಮೆಣಸಿನಕಾಯಿ ಬಜ್ಜಿ ತಂದು ಕೊಟ್ಟರು. ಈ ವೇಳೆ ತಿಂದು ರುಚಿ ನೋಡಿದ ಸಚಿವರಿಗೆ ಖಾರವಾಗಿ ಕಣ್ಣಿನಲ್ಲಿ ನೀರು ಬಂದಿದೆ. ನಂತರ ಯಾರ್ರೀ ಈ ಬಜ್ಜಿ ಮಾಡಿದ್ದು ಎಂದು ಪ್ರಶ್ನಿಸಿದ ಸಚಿವರು, ಬಾಳೆಕಾಯಿ, ಹೀರೆಕಾಯಿ ಬಜ್ಜಿ ಮಾಡೊದಲ್ವೇನ್ರೀ ಎಂದು ಹೇಳಿ ನೀರು ಕುಡಿದು ಹೊರಟು ಹೋಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version