/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಸಚಿವ ಸ್ಥಾನ |ಎಮ್.ವೈ.ಪಾಟೀಲ್,ಬಿ.ಸಿ.ಪಾಟೀಲ್ ಆಕ್ರೋಶ ; ಸಿದ್ದರಾಮಯ್ಯ ನನ್ನ ಕೈ ಬಿಟ್ಟರು : ಬಿ.ಸಿ.ಪಾಟೀಲ್ ಅಸಮಾಧಾನ

Published

on

ಸುದ್ದಿದಿನ ಡೆಸ್ಕ್ : ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಕಲಬುರಗಿ ಜಿಲ್ಲೆಗೆ ಭಾರಿ ಹಿನ್ನಡೆಯಾಗಿದೆ ಎಂದು ಕಲಬುರಗಿಯಲ್ಲಿ ಸಮೀಶ್ರ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ ಅಫಜಲಪುರ ಕಾಂಗ್ರೆಸ್ ಶಾಸಕ ಎಮ್ ವೈ ಪಾಟೀಲ್.

ಒತ್ತಡಕ್ಕೆ ಮಣಿದು, ಹಾಗೂ ಎಲ್ಲರನ್ನ ಸಮಾಧಾಪಡಿಸುವ ದೃಷ್ಟಿಯಿಂದ ಸಚಿವ ಸ್ಥಾನ ಕೈ ತಪ್ಪಿದೆ. ನಾನೇನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ, ವರಿಷ್ಟರ ಬಳಿ ಬೇಡಿಕೆ ಇಟ್ಟಿರಲಿಲ್ಲ. ಶಾಸಕರಾದ ಡಾ ಉಮೇಶ್ ಜಾಧವ್, ಡಾ ಅಜಯ್‌ಸಿಂಗ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಆದರೆ ಎಲ್ಲರನ್ನ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಅಂತಾ ನಿಗಮ ಮಂಡಳಿ ನೀಡಲಾಗಿದೆ.ಆದರೆ ಕಲಬುರಗಿ ಸಂಸತ್ ಕ್ಷೇತ್ರಕ್ಕೆ ಸಮೀಶ್ರ ಸರ್ಕಾರದಿಂದ ಹಿನ್ನಡೆಯಾಗಿದ್ದಂತು ಸತ್ಯ.‌ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಇರಿಸುಮುರಿಸುಂಟು ಮಾಡಿದ್ರಿಂದ ಅವ್ರನ್ನ ಕೈ ಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಬಿ.ಸಿ.ಪಾಟೀಲ್ ಅಸಮಾಧಾನ

ಶಾಸಕ ಬಿ.ಸಿ.ಪಾಟೀಲಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಪಾಟೀಲ ನಿವಾಸದ ಎದುರು ಬೆಂಬಲಿಗರ ಪ್ರತಿಭಟನೆ ನಡೆಸಿದ್ದಾರೆ.ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಡಣದಲ್ಲಿರೋ ನಿವಾಸ ಎದುರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತ ಪಡಿಸಿದ್ದು, ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡ್ತಿರೋ ಕಾಂಗ್ರೆಸ್ ನಿಂದ ಹೊರಬರುವಂತೆ ಒತ್ತಾಯ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಿರೇಕೆರೂರಿನಲ್ಲಿ ಶಾಸಕ ಬಿಸಿ ಪಾಟೀಲ್ ಅವರು’ಖಂಡಿತ ಬರವಸೆ ಇತ್ತು ಈ ಸಲ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗುತ್ತದೆ ಅಂತಾ,‌ ಆದರೆ ಹಾವೇರಿಯ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಬಗ್ಗೆ ಯಾರು ಕೇಳುವವರಿಲ್ಲ. ಹಾವೇರಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ನಾನು. ನಾನು ಬಂದಮೇಲೆ ಕಾಂಗ್ರೆಸ್ ಪಕ್ಷವನ್ನು ಬೆಳಸಿದ್ದೇನೆ. ಮೂರು ಜಿಲ್ಲೆಯಲ್ಲಿ ಲಿಂಗಾಯತ ಕಾಂಗ್ರೆಸ್ ಶಾಸಕ ಇಲ್ಲ.ಹೀಗಾಗಿ ಸಾದರ ಲಿಂಗಾಯತರನ್ನು ಬಿಟ್ಟು ಸಚಿವ ಸಂಪುಟ ರಚಿಸಲಾಗಿದೆ.ನಾವು ಹತ್ತು ಜಿಲ್ಲೆಯಲ್ಲಿ ಸಾದರ ಲಿಂಗಾಯತರಿದ್ದೇವೆ‌’ ಎಂದು ಅಸಮಾಧಾನ ಹೊತಹಾಕಿದರು.

ಹಿರೇಕೆರೂರ ತಾಲೂಕಿಗೆ 38 ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ತುಂಬಾ ಬೇಜಾರಾಗಿದೆ ತುಂಬಾ ನೋವಾಗಿದೆ.ನನ್ನ ಗಾಡ್ ಫಾದರ್ ಸಿದ್ದರಾಮಯ್ಯ. ನಾನು ಸಿದ್ದರಾಮಯ್ಯರನ್ನು ನಂಬಿಕೊಂಡಿದೆ.‌ಅವರು ಮುಖ್ಯಮಂತ್ರಿ ಮಾಡಲು ದ್ವನಿ ಎತ್ತಿದವರಲ್ಲಿ ನಾನು ಮೊದಲಿಗ. ಆದರೆ ಸಿದ್ದರಾಮಯ್ಯ ನನ್ನನ್ನು ಕೈ ಬಿಟ್ಟಿದ್ದಾರೆ. ಬಿಜಾಪುರ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಿದ್ದಾರೆ.ನನ್ನ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರು ಮಾತನಾಡಿಲ್ಲ. ಮುಂದಿನ ನಡೆ ಕಾದು ನೋಡಿ. ಯಾವುದೇ ಕಾರಣಕ್ಕೂ ಬಿಜೆಪಿ ಸೇರೊಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version