ದಿನದ ಸುದ್ದಿ
ದೀಪಾವಳಿ | ಮಿಂಟೋ ಆಸ್ಪತ್ರೆಯಲ್ಲಿ 24*7 ಚಿಕಿತ್ಸೆ : ಸುಜಾತ ರಾಥೋಡ್
ಸುದ್ದಿದಿನ, ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆ ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ರಿಂದ ಸುದ್ದಿಗೋಷ್ಠಿ ನಡೆಸಿ, ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಆಸ್ಪತ್ರೆಯಲ್ಲಿನ ತಯಾರಿ ಕುರಿತು ಮಾತನಾಡಿದರು.
ಈ ಬಾರಿ ಮಿಂಟೋ ಆಸ್ಪತ್ರೆಯಲ್ಲಿ 24/7 ಚಿಕಿತ್ಸೆ ಕಲ್ಪಿಸಲಾಗಿದ್ದು, ಒಳರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ಹಾಗೂ ಪೂರ್ಣ ಪ್ರಮಾಣದ ವೈದ್ಯರು, ನರ್ಸ್ ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿ ಹಲವರ ನಿಯೋಜನೆ ಮಾಡಲಾಗಿದೆ ಎಂದರು.
ಕಳೆದ ವರ್ಷ 60 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ 10-20 ವರ್ಷದ ಹುಡುಗರು ಹೆಚ್ಚಾಗಿದ್ದರು. ಹಬ್ಬದ ಸಮಯದಲ್ಲಿ ಆಸ್ಪತ್ರೆಯ ಯಾವ ಸಿಬ್ಬಂದಿಗೂ ರಜೆ ನೀಡುವುದಿಲ್ಲ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401