ಲೈಫ್ ಸ್ಟೈಲ್
ಮಿಸ್ ಇಂಡಿಯಾ ವರ್ಲ್ಡ್ ‘ಅನುಕೀರ್ತಿ ವಾಸ್’ ರ ಸ್ಟೈಲಿಂಗ್ ಸೀಕ್ರೇಟ್..!
ಮುಂಬೈನ ವಲ್ಲಭಾಯ್ ಪಟೇಲ್ ಒಳ ಕ್ರೀಡಾಂಗಣದಲ್ಲಿ, ಜೂನ್ 19 2018 ರಂದು ನಡೆದ FBB ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಬ್ಯೂಟಿ ಸ್ಪರ್ಧೆವಲ್ಲಭಭಾಯ್ ಯಲ್ಲಿ ತಮಿಳುನಾಡಿನ ಅನುಕೀರ್ತಿ ವ್ಯಾಸ್ 2018 ರ 55 ನೇ ಸಂಚಿಕೆಯ “ಫೆಮಿನಾ ಮಿಸ್ ಇಂಡಿಯಾ 2018” ಆಗಿ ವಿಜೇತರಾಗಿದ್ದಾರೆ.
“ಮಿಸ್ ಇಂಡಿಯಾ ಮಿಸ್ ಬ್ಯೂಟಿಫುಲ್ ಸ್ಮೈಲ್ ” ಹಾಗೂ “ಮಿಸ್ ಇಂಡಿಯಾ ಮಿಸ್ ಬ್ಯೂಟಿ ವಿತ್ ಅ ಪರ್ಪಸ್” ಬಿರುದುಗಳನ್ನೂ ಅಲಂಕರಿಸಿದ್ದಾರೆ 19 ವರ್ಷದ ಸುಂದರ ಬಾಲೆ ಅನುಕೀರ್ತಿ ವ್ಯಾಸ್. ಈಕೆ ಚೆನ್ನೈ ನ ಲೊಯೆಲ್ಲಾ ಕಾಲೇಜಿನಲ್ಲಿ B.A French ಓದುತ್ತಿದ್ದು, ಕ್ಯಾಮೆರಾ ಪ್ರಿಯೆ ಅನು ಮುಂದೆ ಸೂಪರ್ ಮಾಡೆಲ್ ಆಗಿ ಮಿಂಚುವ ಮಹದಾಸೆ ಹೊತ್ತಿದ್ದಾರೆ.
ಅನುಕೀರ್ತಿ ವಾಸ್ ರ ಫ್ಯಾಷನ್ ಸೀಕ್ರೇಟ್
ಪ್ರತಿಷ್ಠಿತ ಫ್ಯಾಷನ್ ಡಿಸೈನರ್ @gauravguptaofficial ರ ಸುಂದರ ನೀಲಿ ಗೌನ್ ನಲ್ಲಿ ಮಿಂಚುತ್ತಿದ್ದಾರೆ ಸುಂದರಿ. ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ತಮ್ಮದಾಗಿಸಿಕೊಂಡರು.
@biancalouzado_79 ಈ ಮುದ್ದು ಬೊಂಬೆಯ ಮೇಕೋವರ್ ಮಾಡಿದ್ದಾರೆ.
@meghana_twoinfinity ಮತ್ತು @harshitaramchsndani_ ಇವರ ಸ್ಟೈಲಿಸ್ಟ್ ಗಳಾಗಿದ್ದಾರೆ..
ಗೆಲುವಿನ ಬಗ್ಗೆ ಅನುಕೀರ್ತಿ ವಾಸ್ ಏನನ್ನುತ್ತಾರೆ
ಪಿಂಕ್ ಶಾರ್ಟ್ ಫ್ರಾಕ್ ನಲ್ಲಿ ಮಿಂಚುತ್ತಿರುವ ಭಾರತೀಯ ವಿಶ್ವ ಸುಂದರಿ “ಸಕಾರಾತ್ಮಕ ಮನಸ್ಸು ಏನನ್ನು ಬೇಕಾದರೂ ಸಾಧಿಸಲು ಪ್ರೇರೇಪಿಸುತ್ತದೆ” ಎಂದು ತಮ್ಮ ಇಂಸ್ಟಾ ಪ್ರೊಫೈಲ್ ನಲ್ಲಿ ಹಂಚಿಕೊಂಡಿದ್ದಾರೆ ..
“ನಿಮ್ಮ ಕನಸುಗಳು ನಿಮ್ಮನ್ನು ಹೆದರಿಸದಿದ್ದಲ್ಲಿ, ಅವು ಅಂತಹ ದೊಡ್ಡ ಕನಸುಗಳಲ್ಲಿ.. ಕನಸು ಕಾಣುವುದು ನಿಲ್ಲಿಸದಿರಿ, ಕನಸನ್ನು ಸಾಕಾರ ಗೊಳಿಸಿಕೊಳ್ಳುವುದನ್ನು ನಿಲ್ಲಿಸದಿರಿ. ವಿಶ್ವ ಸುಂದರಿ ಆಗಬೇಕೆಂಬ ನನ್ನ ಕನಸು ಇಂದು ಈಡೇರಿದೆ” ಎಂದು ಸಕಾರಾತ್ಮಕ ನುಡಿಗಳನ್ನ ಹಂಚಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401