ದಿನದ ಸುದ್ದಿ
ತಪ್ಪಿದ ವಿಮಾನ ದುರಂತ: 150 ಪ್ರಯಾಣಿಕರು ಅಪಾಯದಿಂದ ಪಾರು
ಸುದ್ದಿದಿನ ಡೆಸ್ಕ್: ಕುವೈತನಿಂದ ಹೈದರಾಬಾದಿಗೆ ಬರುತ್ತಿದ್ದ ವಿಮಾನವೊಂದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ 150 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದಿಗೆ ಹೋಗುತ್ತಿದ್ದ ಜಝೀರ್ ಫ್ಲೈಟ್ (ಜೆ9 608) ವಿಮಾನದ ಬಲಭಾಗದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನವನ್ನು ಶಂಷದಬಾದ ರಾಜೀವಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಇದರಿಂದ ವಿಮಾನದಲ್ಲಿದ್ದ ೧೫೦ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ವಿಮಾನದಲ್ಲಿ ಬೆಳಗ್ಗೆ 1.33ರಿಂದ 1.36ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡಿಸುವಲ್ಲಿ ಜಾಗ್ರತರಾದರು. ಮುಂದಾಗುವ ಅನಾಹುತ ತಪ್ಪಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401